ಬೆಳ್ತಂಗಡಿ: ಕಚೇರಿಯಲ್ಲೇ ಹೃದಯಾಘಾತ, ಕರ್ತವ್ಯನಿರತ ಗ್ರಾಮ ಸಹಾಯಕ ನಿಧನ

ಬೆಳ್ತಂಗಡಿ: ಕಚೇರಿಯಲ್ಲೇ ಹೃದಯಾಘಾತ, ಕರ್ತವ್ಯನಿರತ ಗ್ರಾಮ ಸಹಾಯಕ ನಿಧನ

ನೇಸರ ಜೂ.07: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕರೊಬ್ಬರು ಕರ್ತವ್ಯದಲ್ಲಿದ್ದಾಗ ಕಚೇರಿ ಯಲ್ಲೇ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೇಲಂತಬೆಟ್ಟು ಗ್ರಾಮದ ಗ್ರಾಮ ಸಹಾಯನಾಗಿದ್ದ ಉರುವಾಲು ಗ್ರಾಮದ ಬೇಂಗಾಯಿ ನಿವಾಸಿ ಸುಂದರ್ ಗೌಡ (45) ಮೃತಪಟ್ಟ ವ್ಯಕ್ತಿ. ಮಂಗಳವಾರ ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ, ಸುಂದರಗೌಡ ಕರ್ತವ್ಯದಲ್ಲಿದ್ದರು. ಮಧ್ಯಾಹ್ನ ವೇಳೆ ಮತ್ತೋರ್ವ ಗ್ರಾಮಲೆಕ್ಕಿಗ ಶಿವಕುಮಾರ್‌ ಹಾಗೂ ಮುಂಡೂರು ಗ್ರಾ.ಪಂ. ಸದಸ್ಯ ಸಂತೋಷ್ ಮುಂಡೂರು ಅವರೊಂದಿಗೆ ಚಹಾ‌ ಸೇವಿಸಿ‌ ಕಚೇರಿಗೆ ತೆರಳಿದ್ದರು. ಈ ವೇಳೆಗೆ ಎದೆನೋವು‌ ಕಾಣಿಸಿಕೊಂಡಿದೆ. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ಕಚೇರಿ ಸಿಬಂದಿ, ಗ್ರಾಮಲೆಕ್ಕಿಗರು, ಗ್ರಾಮಸಹಾಯಕರು, ಸ್ನೇಹಿತರು ಬಂದು ಮೃತರ ಅಂತಿಮ ದರ್ಶನ ಪಡೆದರು. ಮೃತ ಸುಂದರ ಗೌಡ ಬೇಂಗಾಯಿ ತಾಯಿ, ಪತ್ನಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಜಾಹೀರಾತು

Leave a Reply

You May Have Missed

error: Content is protected !!