ನೆಲ್ಯಾಡಿ ಜೇಸಿ ಘಟಕಕ್ಕೆ Outstanding LO Runner ಪ್ರಶಸ್ತಿ

ನೆಲ್ಯಾಡಿ ಜೇಸಿ ಘಟಕಕ್ಕೆ Outstanding LO Runner ಪ್ರಶಸ್ತಿ

ನೇಸರ ಜೂ.09: ಮಡಂತ್ಯಾರ್ ನಲ್ಲಿ ನಡೆದ ಭಾರತದ ವಲಯ ಹದಿನೈದರ ಮಧ್ಯಂತರ ಸಮ್ಮೇಳನ ರಂಗೋಲಿ ಕಾರ್ಯಕ್ರಮದಲ್ಲಿ ನೆಲ್ಯಾಡಿ ಜೇಸಿ ಘಟಕವು ತನ್ನ ಅರ್ಧ ವರ್ಷದ ಹಲವು ವಿಭಾಗಗಳಲ್ಲಿನ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಪ್ರಶಸ್ತಿಗಳನ್ನು ಪಡೆಯಿತು.

ಜೇಸಿ ಜಯಂತಿ ಬಿ ಎಂ ಇವರ ಅಧ್ಯಕ್ಷೀಯ ಅವಧಿಯಲ್ಲಿ ನೆಲ್ಯಾಡಿ ಘಟಕವು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ, ವಿಶ್ವ ಆರೋಗ್ಯ ದಿನಾಚರಣೆ, ಜೇಸಿ ಸದಸ್ಯರಿಗೆ ತರಬೇತಿ, ಪ್ರಾಥಮಿಕ ಶಾಲಾ ಮಕ್ಕಳಿಗೆ ತರಬೇತಿ, ಅನಾಥಾಶ್ರಮದ ಅನಾಥರಿಗೆ ಆಹಾರ ಕಿಟ್ ವಿತರಣೆ, ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಹಕಾರ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ, ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ, ವಲಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮುಂತಾದ ಕಾರ್ಯಕ್ರಮಗಳ ಸಾಧನೆಗೆ ವಲಯದಿಂದ Outstanding LO Runner ಪ್ರಶಸ್ತಿಗೆ ಭಾಜನವಾಯಿತು.
ಸಮ್ಮೇಳನದಲ್ಲಿ ನಿಕಟ ಪೂರ್ವ ಅಧ್ಯಕ್ಷ ಜೇಸಿ ಗಿರೀಶ್ ಡಿ, ಪೂರ್ವಾಧ್ಯಕ್ಷರಾದ ಜೇಸಿ ಜಯಾನಂದ ಬಂಟ್ರಿಯಾಲ್, ಜೇಸಿ ಶಿವಪ್ರಸಾದ್, ಜೇಸಿ ಅಬ್ದುಲ್ ರಹಮಾನ್, ಜೇಸಿ ವಿನ್ಯಾಸ್ ಬಂಟ್ರಿಯಾಲ್, ಜೇಜೇಸಿ ಅಧ್ಯಕ್ಷ ಅಕ್ಷಯ್, ಜೇಜೇಸಿ ಭವಿಷ್ಯ, ಜೇಜೇಸಿ ತೇಜಸ್ವಿನಿಯವರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!