ಪುತ್ತೂರು: ಕರಿಮಣಿ ಸರ ಎಳೆದು ಪರಾರಿ

ಪುತ್ತೂರು: ಕರಿಮಣಿ ಸರ ಎಳೆದು ಪರಾರಿ

ನೇಸರ ಜೂ.09: ಬೆಟ್ಟಂಪಾಡಿ ಗ್ರಾಮದ ಕೋನಡ್ಕದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕರಿಮಣಿ ಸರ ಎಳೆದುಕೊಂಡು ಪರಾರಿಯಾದ ಘಟನೆ ನಡೆದಿದೆ.
ಜೂ. 7ರಂದು ರತ್ನಾ ಅವರು ಮನೆಗೆ ಹೋಗುತ್ತಿದ್ದ ವೇಳೆ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಹೋಗುತ್ತಿದ್ದ ಬೈಕ್‌ ಸವಾರ ಅಕ್ಕ ಎಂದು ಕರೆಯುತ್ತಾ, ಮಹಿಳೆಯ ಕುತ್ತಿಗೆಯ ಕರಿಮಣಿ ಸರ ಎಳೆದಿದ್ದಾನೆ. ಮಹಿಳೆ ಕಿರುಚಿದ್ದು, ಕರಿಮಣಿ ಸರ ಬಿಗಿಯಾಗಿ ಹಿಡಿದುಕೊಂಡು ಪ್ರತಿರೋಧ ತೋರಿದ್ದಾರೆ. ಆರೋಪಿ ಬಲವಾಗಿ ಎಳೆದ ಪರಿಣಾಮ ಅರ್ಧ ಸರ ಕಳ್ಳನ ಪಾಲಾಗಿದೆ.
ಚಿನ್ನದ ಕರಿಮಣಿ ಸರ ಸುಮಾರು 26 ಗ್ರಾಂ ಹೊಂದಿದ್ದು, ಆ ಪೈಕಿ ಸುಮಾರು 11 ಗ್ರಾಂ ಕಳ್ಳನ ಕೈಸೇರಿದೆ. ಕಳವಾದ ಕರಿಮಣಿಯ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!