ದಕ್ಷಿಣ ಕನ್ನಡ ಜಿಲ್ಲಾ ನೂತನ ಎಡಿಸಿಯಾಗಿ ಡಾ.ಎಚ್.ಎಲ್.ನಾಗರಾಜ್

ದಕ್ಷಿಣ ಕನ್ನಡ ಜಿಲ್ಲಾ ನೂತನ ಎಡಿಸಿಯಾಗಿ ಡಾ.ಎಚ್.ಎಲ್.ನಾಗರಾಜ್

ನೇಸರ ನ11: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ‌ ಹಿರಿಯ ಕೆಎಎಸ್ ಅಧಿಕಾರಿ ಡಾ.ಎಚ್.ಎಲ್.ನಾಗರಾಜ್ ರವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿದ್ದರು. ಕುಣಿಗಲ್ ತಾಲೂಕು ಹೊನ್ನೆನಹಳ್ಳಿ ಗ್ರಾಮದವರಾದ ಇವರು 2005ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ. ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಅಪರ ಜಿಲ್ಲಾದಿಕಾರಿಯಾಗಿದ್ದ ಪ್ರಜ್ಞಾ ಅಮ್ಮೆಂಬಳ ವರ್ಗಾವಣೆಯಾಗಿದ್ದು ಇನ್ನಷ್ಟೇ ಹುದ್ದೆ ನಿಯೋಜನೆಯಾಗಬೇಕಿದೆ.

Leave a Reply

You May Have Missed

error: Content is protected !!