ಕಳೆಂಜ: ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಭಾರತಿ ಎಸ್ ಹೃದಯಾಘಾತದಿಂದ ನಿಧನ

ಕಳೆಂಜ: ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಭಾರತಿ ಎಸ್ ಹೃದಯಾಘಾತದಿಂದ ನಿಧನ

ನೇಸರ ಜೂ.13: ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ, ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ ಭಾರತಿ ಎಸ್(42ವ) ರವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಜೂ.13ರಂದು ನಿಧನರಾದರು.
ಜೂ.12ರಂದು ಬೆಂಗಳೂರಿನಲ್ಲಿ ಇಂಟರ್ವ್ಯೂಗೆ ತೆರಳಿದರು. ಜೂ.13 ರಂದು ಬೆಳಗ್ಗೆ 10.00 ಗಂಟೆಗೆ ಇಂಟರ್ ವ್ಯೂಗೆ ತೆರಳಿದ ವೇಳೆ ಅಲ್ಲಿ ಹೃದಯಾಘಾತಕ್ಕೊಳಗಾದರು ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ದಿವ್ಯಜ್ಯೊತಿ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೃತರ ಪತಿ ಡಾ.ಕುಶಾಲಪ್ಪ ಎಸ್ ಇವರು ಮೇಲಂತಬೆಟ್ಟು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
ಮೃತರು ಪತಿ, 1 ಗಂಡು, 1 ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

ಜಾಹೀರಾತು

Leave a Reply

You May Have Missed

error: Content is protected !!