ಕುಂಟಾಲಪಲ್ಕೆ : ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಕುಂಟಾಲಪಲ್ಕೆ : ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ನೇಸರ ಜೂ.18: ಕುಂಟಾಲಪಲ್ಕೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ, ದಿವಂಗತ ಸೋಮಯ್ಯ ಆಚಾರ್ಯ ಇವರ ಸ್ಮರಣಾರ್ಥವಾಗಿ ಜೂನ್ 18 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.
ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ರಾಜೇಶ್ ಬೊಳ್ಳೋಡಿ ಇವರು ಶಾಲಾ ಅಧ್ಯಾಪಕರ ಸಮ್ಮುಖದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ ವಿ. ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸುದರ್ಶನ ಆಚಾರ್ಯ ಇವರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಿದರು. ಮುಖ್ಯೋಪಾಧ್ಯಾಯಿನಿ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಮುಂದೆಯೂ ಇಂತಹ ಸಮಾಜಮುಖೀ ಕಾರ್ಯಗಳು ಯುವಕ ಮಂಡಲದ ವತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಕಾರ್ಯದರ್ಶಿ ಸುಮಂತ್ ಗೌಡ, ಸಂಚಾಲಕರಾದ ಶ್ರೀವತ್ಸ ಗೋಖಲೆ, ಉಪ ಕಾರ್ಯದರ್ಶಿ ಪ್ರಸನ್ನ ನಾಯಕ್, ಸದಸ್ಯರಾದ ಹರಿಪ್ರಸಾದ್ ಹಾಜರಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!