ಬೆಳ್ತಂಗಡಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ಬರೆದ 6 ವರ್ಷದ ಬಾಲಕ

ಬೆಳ್ತಂಗಡಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ಬರೆದ 6 ವರ್ಷದ ಬಾಲಕ

ನೇಸರ ಜೂ.22: ಯೋಗ ವಿಧಾನದಲ್ಲೊಂದಾದ ವಜ್ರಾಸನದಲ್ಲಿ ಮಾಸ್ಟರ್ ಅಕ್ಷಯ್‌ ಮುಗೆರೋಡಿ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸ. ಹಿ ಪ್ರಾರ್ಥಮಿಕ ಶಾಲೆ ಪದ್ಮುಂಜ ಇಲ್ಲಿಯ 1ನೆ ತರಗತಿಯ ವಿದ್ಯಾರ್ಥಿಯಾದ‌ ಅಕ್ಷಯ್ ಇವರು ಕೃಷಿಕ ಪುರುಷೋತ್ತಮ‌ ಗೌಡ ಮುಗೆರೋಡಿ ಮತ್ತು ಲೀಲಾ ದಂಪತಿಯ ಪುತ್ರನಾಗಿದ್ದಾರೆ.
ವಜ್ರಾಸನದಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿ ತಲೆಯನ್ನು ನೆಲಕ್ಕೆ ತಾಗಿಸುವ ಭಂಗಿಯಲ್ಲಿ 26 ನಿಮಿಷ 35 ಸೆಕುಂಡುಗಳ ಧೀರ್ಘ ಸ್ಥಿರತೆ ಕಾಯ್ದುಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ತಮಿಳುನಾಡಿನ 8ವರ್ಷದ ಬಾಲಕಿ ಆರಾಧನಾ ಮಾಡಿರುವ 15 ನಿಮಿಷ 10 ಸೆಕುಂಡು 599 ಮಿನಿಸೆಕುಂಡಿನ ದಾಖಲೆಯನ್ನು ಸರಿಗಟ್ಟಿದೆ.
ಇದೀಗ ಅಕ್ಷಯ್ ಅವರು ತನ್ನ 6ನೇ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದು ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಇವರ ತಾಯಿ ಲೀಲಾ ಅವರು ಕೂಡ ಈಗಾಗಲೇ ಬೈಸಿಕಲ್ ಕ್ರಂಚಸ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದವರಾಗಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!