ಸುಳ್ಯದ ವಿವಿಧ ಭಾಗಗಳಲ್ಲಿ ಭೂಕಂಪನ: ಭಯಗೊಂಡು ಮನೆಯಿಂದ ಹೊರಬಂದ ಜನತೆ!

ಸುಳ್ಯದ ವಿವಿಧ ಭಾಗಗಳಲ್ಲಿ ಭೂಕಂಪನ: ಭಯಗೊಂಡು ಮನೆಯಿಂದ ಹೊರಬಂದ ಜನತೆ!

ನೇಸರ ಜೂ.25: ಸುಳ್ಯ ತಾಲೂಕಿನ ಜನತೆಗೆ ಬೆಳಗ್ಗೆಯೇ ಭೂಕಂಪನವಾದ ಹಿನ್ನೆಲೆ ಜನರು ಮನೆಯಿಂದ ಭಯಗೊಂಡು ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಬೆಳಿಗ್ಗೆ 9.10, 9.11ರ ಸಮಯದಲ್ಲಿ ಲಘು ಕಂಪನದ‌‌ ಅನುಭವ ಆಗಿದ್ದು, ಹಲವೆಡೆ ವಿಚಿತ್ರ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಲ್ಲುಗುಂಡಿ, ಸಂಪಾಜೆ, ಗೂನಡ್ಕ, ಅಡ್ತಲೆ, ಅರಂತೋಡು, ಅರಂಬೂರು ಮತ್ತಿತರ ಭಾಗಗಳಲ್ಲಿ ಗುಡುಗಿನ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಗೂನಡ್ಕದಲ್ಲಿ ಭಾರೀ ಶಬ್ದದೊಂದಿಗೆ ಸುಮಾರು 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಸುಳ್ಯ ನಗರ ವ್ಯಾಪ್ತಿಯ ಬೀರಮಂಗಲ ಭಾಗದಲ್ಲಿ ಗುಡುಗಿನ ಶಬ್ದದೊಂದಿಗೆ ಸುಮಾರು 4- 5 ಸೆಕೆಂಡುಗಳ ಕಾಲ ಲಘು ಭೂ ಕಂಪನ ಆಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಕಂಪನದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರು ಹೇಳಿ ಕೊಂಡಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!