ಬೆಳ್ತಂಗಡಿ: ಕಾರಿನ ಒಳಗೆ ನುಗ್ಗಿದ ನಾಗರಹಾವಿನ ರಕ್ಷಣೆ

ಬೆಳ್ತಂಗಡಿ: ಕಾರಿನ ಒಳಗೆ ನುಗ್ಗಿದ ನಾಗರಹಾವಿನ ರಕ್ಷಣೆ

ನೇಸರ ಜೂ.26: ಬೆಳ್ತಂಗಡಿಯ ಸಂತೆಕಟ್ಟೆಯ ಅಯ್ಯಪ್ಪ ಗುಡಿ ಬಳಿ ಓಮ್ನಿ ಕಾರಿನ ಒಳಗೆ ನುಗ್ಗಿದ ನಾಗರಹಾವನ್ನು ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ್ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಶನಿವಾರ, ಬೆಳ್ತಂಗಡಿಯ ಸಹಕಾರಿ ಸಂಘ ಒಂದಕ್ಕೆ ಕಾರ್ಯನಿಮಿತ್ತ ಓಮ್ನಿ ಕಾರಿನಲ್ಲಿ ಬಂದಿದ್ದವರು ರಸ್ತೆ ದಾಟುತ್ತಿದ್ದ ನಾಗರಹಾವನ್ನು ಕಂಡು ಕಾರನ್ನು ನಿಲ್ಲಿಸಿದ್ದಾರೆ. ಈ ಸಮಯ ನಾಗರಹಾವು ರಸ್ತೆಯಿಂದ ಕಾರಿನೊಳಗೆ ನುಗ್ಗಿರುವುದನ್ನು ಸ್ಥಳೀಯರು ಗಮನಿಸಿ ಕೂಡಲೇ ಎಚ್ಚರಿಸಿ, ಕಾರಿನಲ್ಲಿದ್ದವರನ್ನು ಕೆಳಕ್ಕಿಳಿಯಲು ತಿಳಿಸಿದರು.
ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಅವರು ಕಾರಿನ ಒಳಗೆ ಹುಡುಕಾಡಿದಾಗ ನಾಗರಹಾವು ಪತ್ತೆಯಾಗಲಿಲ್ಲ ಕೊನೆಗೆ ಕಾರಿನ ಮುಂಭಾಗದ ಸೀಟನ್ನು ಬಿಚ್ಚಿ ನೋಡಿದಾಗ ನಾಗರಹಾವು ಅದರೊಳಗಿರುವುದು ಕಂಡು ಬಂತು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!