ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ದೈವನರ್ತಕ ಹುಕ್ರಪ್ಪ ಪರವ ವಿಧಿವಶ

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ದೈವನರ್ತಕ ಹುಕ್ರಪ್ಪ ಪರವ ವಿಧಿವಶ

ನೇಸರ ದ16 :ದೈವನರ್ತಕ, ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ ಹುಕ್ರಪ್ಪ ಪರವ(72 ವ.)ರವರು ಅನಾರೋಗ್ಯದಿಂದ ದ.16ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ತನ್ನ 16ನೇ ವಯಸ್ಸಿನಲ್ಲಿಯೇ ದೈವನರ್ತನ ಸೇವೆ ಆರಂಭಿಸಿದ ಹುಕ್ರಪ್ಪ ಪರವರವರು ಮೂರು ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ಇದ್ದರು.ಶ್ರೀ ದುರ್ಗಾಪರಮೇಶ್ವರಿ ಬೀಡು ,ಇಚಿಲಂಪಾಡಿ , ಉಳ್ಳಾಕ್ಲು ದೈವಸ್ಥಾನ ಇಚಿಲಂಪಾಡಿ,ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನ ನೂಜಿಬೈಲ್ ,ಏಣ್ಮೂರು ಕೋಟಿ ಚೆನ್ನಯ ಗರಡಿ, ಸುಳ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿ, ಬಾಯಾರು, ಬಾಳೆಕಲ್ಲು, ಪಾಪೆಮಜಲು, ಕರ್ನಂಬಾಡಿ, ಪರ್ಪುಂಜ, ಶಿಶಿಲ, ಉಪ್ಪಾರಡ್ಕ, ಶಿಬಾಜೆ ಮೊಂಟೆತ್ತಡ್ಕ ಸೇರಿದಂತೆ ಕಾಸರಗೋಡು ಹಾಗೂ ದ.ಕ.ಜಿಲ್ಲೆಯ ವಿವಿಧ ದೈವಸ್ಥಾನಗಳಲ್ಲಿ ಇವರು ನರ್ತನ ಸೇವೆ ನೀಡುತ್ತಿದ್ದರು.
ಕೊಡಮಣಿತ್ತಾಯ, ಕೋಟಿ, ರುದ್ರಚಾಮುಂಡಿ, ಅಲ್ಲತ್ತಾಯ ಮತ್ತಿತರ ದೈವಗಳ ನರ್ತನ ಸೇವೆ ನೀಡುತ್ತಿದ್ದರು. ಇವರ ತಂದೆ ದಿವಂಗತ ರಾಮ ಪರವರವರು ದೈವನರ್ತಕರಾಗಿದ್ದು ಅವರ ಬಳಿಕ ಹುಕ್ರಪ್ಪ ಪರವರವರು ನರ್ತನ ಸೇವೆ ಮಾಡುತ್ತಿದ್ದರು. ಮೃತರು ಪತ್ನಿ ಕಮಲ, ಪುತ್ರರಾದ ಚೆನ್ನಪ್ಪ ಪರವ, ಡೀಕಯ್ಯ ಪರವರವರನ್ನು ಅಗಲಿದ್ದಾರೆ

Leave a Reply

You May Have Missed

error: Content is protected !!