ಶ್ರೀ ರಾಜನ್ ದೈವ ಮತ್ತು ಪರಿವಾರ ದೈವಗಳು ಬೊನ್ಯ ಸಾಗು, ದೈವಗಿರಿ-ನೆಲ್ಯಾಡಿ. ||ಸಾನಿಧ್ಯ ದೋಷಗಳ ಪರಿಹಾರ ಕಾರ್ಯಕ್ರಮ||

ಶ್ರೀ ರಾಜನ್ ದೈವ ಮತ್ತು ಪರಿವಾರ ದೈವಗಳು ಬೊನ್ಯ ಸಾಗು, ದೈವಗಿರಿ-ನೆಲ್ಯಾಡಿ. ||ಸಾನಿಧ್ಯ ದೋಷಗಳ ಪರಿಹಾರ ಕಾರ್ಯಕ್ರಮ||

ನೇಸರ ಡಿ 16: ಶ್ರೀ ರಾಜನ್ ದೈವ ಮತ್ತು ಪರಿವಾರ ದೈವಗಳು ಬೊನ್ಯ ಸಾಗು, ದೈವಗಿರಿ-ನೆಲ್ಯಾಡಿ.ದೈವಗಳ ದೈಯರ ಮಜಲು ಮೂಲ ಸಾನಿಧ್ಯದ ಜೀರ್ಣೋದ್ಧಾರದ ಅಂಗವಾಗಿ ಸ್ಥಳ ಸಾನಿಧ್ಯ ದೋಷಗಳ ಪರಿಹಾರ ಕಾರ್ಯಕ್ರಮಗಳು ದಿ.16-12-21 ರಿಂದ 18-12-21 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕುರಾಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

ಈ ಪ್ರಯುಕ್ತ ದಿ.16-12-21ನೇ ಗುರುವಾರ 108 ತೆಂಗಿನಕಾಯಿಯ ಗಣಹೋಮ, ಸಗ್ರಹ ಮೃತ್ಯುಂಜಯ ಹೋಮಾದಿಗಳು ನಡೆದವು. ದಿ.17 ಮತ್ತು 18 ರಂದು ಚಂಡಿಕಾ ಹೋಮ, ತ್ರಿಕಾಲ ಪೂಜೆ, ಸುದರ್ಶನ ಹೋಮ, ಅಘೋರ ಹೋಮ, ತಿಲಹೋಮಗಳು ನಡೆಯಲಿದೆ. ಎಂದು ದೇವಸ್ಥಾನದ ಅಧ್ಯಕ್ಷ ಸತೀಶ್ ಚಂದ್ರ ಗೌಡ ಅತ್ರಿಜಾಲು ತಿಳಿಸಿದರು.

ಉಪಾಧ್ಯಕ್ಷರಾದ ಕೊರಗಪ್ಪ ಗೌಡ ಬಾಯಿತ್ರೋಡಿ, ಕಾರ್ಯದರ್ಶಿ ಚಂದ್ರಶೇಖರಗೌಡ ಡೆಂಜ, ಕೋಶಾಧಿಕಾರಿ ಸೀತಾರಾಮ ಗೌಡನ ಕಾನ ಮನೆ, ಸುರೇಶ ಪಡಿಪಂಡ ಮತ್ತು ಆಡಳಿತ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!