ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಂಗಳೂರಿಗೆ ಭೇಟಿ

ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಂಗಳೂರಿಗೆ ಭೇಟಿ

ನೇಸರ ಡಿ.18: ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಶಾಂಕ ಗೋಖಲೆ ಮಾರ್ಗದಮನೆ,ನಿರ್ದೇಶಕರಾದ ಶಿವಪ್ರಸಾದ್ ಪುತ್ತಿಲ, ಜಯಚಂದ್ರ ರೈ, ರಾಜಕುಮಾರ್ ಮುಖ್ಯಕಾರ್ಯನಿರ್ವಾಹಕ ಸೋಮಸುಂದರ ಶೆಟ್ಟಿ, ಕುಟ್ರುಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಕಿರಣ್ ಗೋಗಟೆ. ಅವರನ್ನು ಒಳಗೊಂಡ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ತಂಡವು ದಿನಾಂಕ 14-12-2021 ರಂದು ಮಂಗಳವಾರ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಂಗಳೂರಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ಕಾರ್ಯವೈಖರಿಯನ್ನು, ಅತ್ಯುತ್ತಮ ವ್ಯವಹಾರ ಮತ್ತು ಬೆಳವಣಿಗೆಗಳ ಬಗ್ಗೆ ಅಧ್ಯಕ್ಷರಾದ ಕೆ.ಹರಿಶ್ಚಂದ್ರ ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಕುಮಾರ್ ಭಟ್ ಅವರು ಮಾಹಿತಿ ನೀಡಿದರು.

Leave a Reply

You May Have Missed

error: Content is protected !!