ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಗೆ ಗೌರಾವರ್ಪಣೆ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಗೆ ಗೌರಾವರ್ಪಣೆ

ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ)ಕುಂದಾಪುರ ಇವರ ವತಿಯಿಂದ ಆಸರೆ2 ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ತುಳುನಾಡಿನ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ದ.ಕ ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ದ.ಕ ಇವರನ್ನು ಗುರುತಿಸಿ ಸಂಸ್ಥೆಗೆ ಗೌರಾವರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮನೆಯ ಫಲಾನುಭವಿ ಗಿರಿಜಾ ಮೊಗೇರ್ತಿ ತುರ್ತು ಸೇವಾ ಯೋಜನೆಯಾಗಿ ರೂ 5000 ರೂ ಚೆಕ್ ನ್ನು ಸಹಾಯಹಸ್ತ ಟ್ರಸ್ಟಿನ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಅರ್ಜುನ್ ಭಂಡಾರ್ಕರ್, ಗೋವಿಂದ ಬಾಬು ಪೂಜಾರಿ, ಯಶುಪಾಲ ಸುವರ್ಣ ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಅಧ್ಯಕ್ಷ ಪ್ರದೀಪ್ ಕೋಟೇಶ್ವರ ಹಾಗೂ ಟ್ರಸ್ಟಿನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!