ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮೋತ್ಸವದ ವೇಳೆ ಆಕಸ್ಮಿಕವಾಗಿ ಕೈಯಲ್ಲೇ ಸಿಡಿದ ಸಿಡಿಮದ್ದು,ಸೋಮಶೇಖರ್ ನಡುಗುಡ್ಡೆ ಪ್ರಾಣಾಪಾಯದಿಂದ ಪಾರು

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮೋತ್ಸವದ ವೇಳೆ ಆಕಸ್ಮಿಕವಾಗಿ ಕೈಯಲ್ಲೇ ಸಿಡಿದ ಸಿಡಿಮದ್ದು,ಸೋಮಶೇಖರ್ ನಡುಗುಡ್ಡೆ ಪ್ರಾಣಾಪಾಯದಿಂದ ಪಾರು

ನೇಸರ ಮಾ .23: ನೇಮೋತ್ಸವದ ವೇಳೆ ಸಿಡಿಮದ್ದು ಸಿಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೈಯಲ್ಲಿ ಸ್ಪೋಟಕ  ಸಿಡಿದು ಸೋಮಶೇಖರ್ ನಡುಗುಡ್ಡೆ ಎಂಬವರು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪಕ್ಕದಲ್ಲಿ ನಡೆದಿದೆ .
ನೂಜಿ ದೈವಸ್ಥಾನದ ನೇಮೋತ್ಸವದ ಹಿನ್ನೆಲೆಯಲ್ಲಿ ಸೋಮಶೇಖರ್ ನಡುಗುಡ್ಡೆ ಸಿಡಿಮದ್ದು ಸಿಡಿಸುವ ಜವಾಬ್ದಾರಿ ವಹಿಸಿದ್ದರು. ಮುಂಜಾನೆ ಸಿಡಿಮದ್ದು ಸಿಡಿಸುವ ವೇಳೆ ಆಕಸ್ಮಿಕವಾಗಿ ಕೈಯಲ್ಲಿದ್ದ ಎರಡು ಸ್ಪೋಟಕಗಳು ಏಕಕಾಲಕ್ಕೆ ಸಿಡಿದಿದೆ ಎನ್ನಲಾಗಿದೆ.

ಸ್ಪೋಟಕದ ತೀವ್ರತೆಗೆ ಎಡ ಕೈಯ ಬೆರಳುಗಳು ಛಿದ್ರಗೊಂಡು ಗಂಭೀರ ಗಾಯವಾಗಿದೆ. ಸೋಮಶೇಖರ್ ರವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ.
ಟಿ.ವಿ ದುರಸ್ತಿ ಮಾಡುವ ಮೂಲಕ, ಸಮಾಜಮುಖಿ ಚಟುವಟಿಕೆಗಳಲ್ಲಿ ಸೋಮಶೇಖರ್ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಅವರ ಕೈಯಲ್ಲಿ ಸ್ಪೋಟಕ ಸಿಡಿದ ಪರಿಣಾಮ ಎಡ ಕೈಗೆ ಬಲವಾದ ಏಟು ಆಗಿದ್ದು ಹೀಗಾಗಿ ಸರ್ಜರಿ ಅನಿವಾರ್ಯ ಎಂಬುದನ್ನು ವೈದ್ಯರು ತಿಳಿಸಿರುತ್ತಾರೆ. ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ನೆರವು ಅಗತ್ಯವಾಗಿದ್ದು ದಾನಿಗಳು ಸಹಾಯ ಮಾಡುವಂತೆ ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಭಕ್ತವೃಂದ ಮನವಿ ಮಾಡಿದೆ.

ಬ್ಯಾಂಕ್ ಖಾತೆದಾರರ ಹೆಸರು: ವಸಂತ ಎನ್

A/c NO:4512500100993001

IFSC CODE :KARB0000451

ಕರ್ನಾಟಕ ಬ್ಯಾಂಕ್ ಸಂಪರ್ಕ ಸಂಖ್ಯೆ: 9740964746

Previous post

ಪುಟಾಣಿ ಪ್ರತಿಭೆ ಅದ್ವಿಕಾ ಬಾಕಿಲ ಹಾಡಿ ಅಭಿನಯಿಸಿದ “ಆದಿಮಾಯೆ” ಶರವೂರು ಶ್ರೀ ದುಗೆ೯ಯ ಸ್ತುತಿ..ತುಳು ಭಕ್ತಿ ಸುಗಿಪು ವೀಡಿಯೋ ಆಲ್ಬಮ್ ಬಿಡುಗಡೆ

Next post

ನೆಲ್ಯಾಡಿಯ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಕುಲಪತಿಯವರಿಗೆ ಮನವಿ ಸಲ್ಲಿಕೆ

Leave a Reply

You May Have Missed

error: Content is protected !!