ಕೌಕ್ರಾಡಿ ಗ್ರಾ.ಪಂ.ವಾಟರ್ ಮ್ಯಾನ್ ಬಾಬು ಗೌಡ ನಿಧನ

ಕೌಕ್ರಾಡಿ ಗ್ರಾ.ಪಂ.ವಾಟರ್ ಮ್ಯಾನ್ ಬಾಬು ಗೌಡ ನಿಧನ

ನೇಸರ ಎ.08: ಕೌಕ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಇಚ್ಲಂಪಾಡಿ ಗ್ರಾಮದ ನೇರ್ಲ ನಿವಾಸಿ ಬಾಬು ಗೌಡ(62ವ.)ರವರು ಎ.7ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಬಾಬು ಗೌಡ ರವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ‍್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸ ದ ಅವರು ಎ.೭ರಂದು ರಾತ್ರಿ ನಿಧನರಾಗಿದ್ದಾರೆ.
ಮೃತರು ಕಳೆದ 22 ವರ್ಷಗಳಿಂದ ಕೌಕ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು. ಪ್ರಾಮಾಣಿಕ ಸೇವೆಯ ಮೂಲಕ ಕುಡಿಯುವ ನೀರು ಬಳಕೆದಾರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಪತ್ನಿ ಪ್ರೇಮ, ಪುತ್ರ ಸಚಿನ್, ಪುತ್ರಿಯರಾದ ಪದ್ಮಾವತಿ, ಸುಹಾಸಿನಿಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಜಿ.ಭವಾನಿ, ಪಿಡಿಒ ಮಹೇಶ್, ಜಿ. ಪಂ.ಸದಸ್ಯರು , ಗ್ರಾ.ಪಂ.ಸದಸ್ಯರು,ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

You May Have Missed

error: Content is protected !!