ಸೌತಡ್ಕ: ಹಿಂದೂ ಸಂಸ್ಕಾರ ಶಿಬಿರ 2022

ಸೌತಡ್ಕ: ಹಿಂದೂ ಸಂಸ್ಕಾರ ಶಿಬಿರ 2022

ನೇಸರ ಎ.10: ಶ್ರೀ ಮಹಾಗಣಪತಿ ಕ್ಷೇತ್ರ ಸೌತಡ್ಕ, ಮಹಾಗಣಪತಿ ಸೇವಾ ಟ್ರಸ್ಟ್ ಹಾಗೂ ಶ್ರೀ ರಾಮ ವಿದ್ಯಾ ಸಂಸ್ಥೆ ಪಟ್ಟೂರು ಇವರ ಸಹಯೋಗದೊಂದಿಗೆ ಏಪ್ರಿಲ್ 11 ರಿಂದ 15 ರವರೆಗೆ ಸೌತಡ್ಕ ಕ್ಷೇತ್ರದ ಗಣೇಶ ಕಲಾಮಂದಿರದಲ್ಲಿ ಹಿಂದೂ ಸಂಸ್ಕಾರ ಶಿಬಿರ 2022 ಆಯೋಜಿಸಲಾಗಿದೆ.
10 ರಿಂದ 16ರ ವಯೋಮಾನದ ಮಕ್ಕಳಿಗೆ ಹಿಂದೂ ಸಂಸ್ಕೃತಿಯ ಯೋಗ, ಭಜನೆ, ಭಗವದ್ಗೀತೆ, ಕಥೆಗಳು, ಚಿತ್ರಕಲೆ, ಆಟಗಳು ಮುಂತಾದ ವಿಷಯಗಳ ಕುರಿತಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ.
ಆಸಕ್ತರು 9731854163, 9741398504, 97311496990 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

—ಜಾಹೀರಾತು—

Leave a Reply

You May Have Missed

error: Content is protected !!