ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ : ನೆಲ್ಯಾಡಿ

ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ : ನೆಲ್ಯಾಡಿ

ನೇಸರ ನ 13: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜ್ ನೆಲ್ಯಾಡಿಯಲ್ಲಿ 2020 21 ನೇ ಸಾಲಿನ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಜಯರಾಜ್ ಉದ್ಘಾಟಿಸಿದರು, ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಆಂತರಿಕ ಧೈರ್ಯ ಗರಿಷ್ಠಗೊಳ್ಳುವುದು ಎಂದು ವಿದ್ಯಾರ್ಥಿಗಳಿಗೆ ನುಡಿದರು ಹಾಗೂ ಎಲ್ಲರಿಗೂ ಶುಭವನ್ನು ಹಾರೈಸಿದರು.

ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಗ್ಗ-ಜಗ್ಗಾಟ, ಮಡಕೆ ಒಡೆಯುವುದು, ಸಂಗೀತ ಕುರ್ಚಿ, ಪಿರಮಿಡ್ ಮುಂತಾದ ವಿವಿಧ ಸ್ಪರ್ಧೆಗಳನ್ನು ನಡೆಸಿ.ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ಕಾಲೇಜಿನ ಉಪನ್ಯಾಸಕರುಗಳಾದ ಸುರೇಶ್, ಸೀತರಾಮ್,ಡಾ.ನೂರಂದಪ್ಪ,ಹೇಮಾವತಿ, ಚಂದ್ರಕಲಾ, ವೇರೋನಿಕ, ದಿವ್ಯ ವನಿತಾ, ಸ್ಪೂರ್ತಿ, ಡೀನಾ, ಶೃತಿ, ದಿವ್ಯ ಶ್ರೀ, ನಿಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಮರ್ಶಿದಾ ಸ್ವಾಗತಿ, ವಿಶಾಲ್ ಧನ್ಯವಾವಿತ್ತರು, ಲುಕ್ಮಾನ್.ಕೆ ನಿರೂಪಿಸಿದರು.

Leave a Reply

You May Have Missed

error: Content is protected !!