ವಿಶಿಷ್ಟ ರೀತಿಯಲ್ಲಿ ಹಾಸನದ ರಮೇಶನಿಂದ “ಮಂಜಣ್ಣನ ಸೇವೆ”

ವಿಶಿಷ್ಟ ರೀತಿಯಲ್ಲಿ ಹಾಸನದ ರಮೇಶನಿಂದ “ಮಂಜಣ್ಣನ ಸೇವೆ”

ನೇಸರ ನ14: ಹಲವು ರೀತಿಯಲ್ಲಿ ದೇವರ ಸೇವೆಯನ್ನು ಮಾಡುದನ್ನು ನೋಡಿದ್ದೇವೆ, ಆದರೆ ಇಲ್ಲೋಬ್ಬ ವ್ಯಕ್ತಿ ಯಾರೂ ನಿರೀಕ್ಷಿಸದ ವಿಶಿಷ್ಟ ರೀತಿಯಲ್ಲಿ ಅತ್ಯಂತ ಪುಣ್ಯ ಕೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಲು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬಲ್ಲಿ ರಸ್ತೆ ತಿರುವಿನಲ್ಲಿ ಆಳವಡಿಸಿದ “ಶ್ರೀಕ್ಷೇತ್ರ ಧರ್ಮಸ್ಥಳ” ಸೂಚನಾ ಫಲಕವನ್ನು ಉದ್ದನೆಯ ದಪ್ಪದ ಕೋಲಿಗೆ ಪ್ಲಾಸ್ಟಿಕ್ ಗೋಣಿ ಚೀಲವನ್ನು ಸುತ್ತಿ ಸ್ವಚ್ಛ ಮಾಡುತ್ತಿರುವುದು ಕಂಡು ಬಂತು. ಸ್ಥಳೀಯರು ವಿಚಾರಿಸಿದಾಗ ಈತ ಹಾಸನದ ರಮೇಶ ನಾನು “ಮಂಜಣ್ಣನ ಸೇವೆ” ಮಾಡುತ್ತಿದ್ದೇನೆ ಎಂದು ತಿಳಿಸಿದ. ಈತನಿಗೆ ನೆರೆದಿದ್ದ ಸ್ಥಳೀಯರು ಸೇರಿ ಹಣವನ್ನು ನೀಡಿ ಊಟ-ತಿಂಡಿಗೆ ಬಳಸುವಂತೆ ಹೇಳಿ ಕಳಿಸಿದ ಘಟನೆ ಇಂದು ನಡೆಯಿತು,

Leave a Reply

You May Have Missed

error: Content is protected !!