ಕೌಕ್ರಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸತೀಶ್ ಬಂಗೇರ ರಿಗೆ ಬೀಳ್ಕೊಡುಗೆ

ಕೌಕ್ರಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸತೀಶ್ ಬಂಗೇರ ರಿಗೆ ಬೀಳ್ಕೊಡುಗೆ

ನೇಸರ ಜು.07: ಕಡಬ ತಾಲ್ಲೂಕು ಕೌಕ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಕಳೆದ 9 ವರುಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸತೀಶ್ ಬಂಗೇರ ಇವರು ಪುತ್ತೂರು ತಾಲೂಕು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಕೌಕ್ರಾಡಿ ಪಂಚಾಯತ್ ಸಿಬ್ಬಂದಿಗಳು ಹಾಗೂ ಅಧ್ಯಕ್ಷರು ಹಾಗೂ ಸದಸ್ಯರುಗಳ ಉಪಸ್ಥಿತಿಯಲ್ಲಿ ಹಾರ, ಶಾಲು, ಫಲ ಪುಷ್ಪ, ಸ್ಮರಣಿಕೆಯನ್ನು ನೀಡಿ ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಹೇಶ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಅಧ್ಯಕ್ಷರು ಹಾಗೂ ಸದಸ್ಯರುಗಳಾದ ವಿಶ್ವನಾಥ ಇಚಿಲಂಪಾಡಿ, ರೋಹಿ, ದಿನೇಶ್ ಇಚಿಲಂಪಾಡಿ, ಡೈಸಿ ವರ್ಗೀಸ್, ಪುಷ್ಪ, ಲೋಕೇಶ್ ಬಾಣಜಾಲು, ಸುಧಾಕರ ಜಿ, ಸವಿತಾ, ಮಹೇಶ್ ಪಿ, ವನಿತಾ, ಭವಾನಿ, ಜನಾರ್ಧನ, ಉದಯ ಕುಮಾರ್, ಹನೀಫ್, ದೇವಕಿ, ಶೈಲಾ ಹಾಗೂ ಪಂಚಾಯತ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಲೋಕೇಶ್ ಬಾಣಜಾಲು ಸ್ವಾಗತಿಸಿ, ಮಹೇಶ್ ವಂದಿಸಿದರು
.

Leave a Reply

You May Have Missed

error: Content is protected !!