ಆಲಂಕಾರು ಶಾಲೆಯ ಮುಖ್ಯ ಗುರು ನಿಂಗರಾಜು ಕೆ.ಪಿ ಯವರಿಗೆ ಯೆನಪೋಯಾ ಶಿಕ್ಷಕ ಪ್ರಶಸ್ತಿ -2021

ಆಲಂಕಾರು ಶಾಲೆಯ ಮುಖ್ಯ ಗುರು ನಿಂಗರಾಜು ಕೆ.ಪಿ ಯವರಿಗೆ ಯೆನಪೋಯಾ ಶಿಕ್ಷಕ ಪ್ರಶಸ್ತಿ -2021

ನೇಸರ ನ17: ದ.ಕ.ಜಿ.ಪಂ.ಹಿ.ಪ್ರಾ ಶಾಲೆಯ ಮುಖ್ಯ ಗುರು ನಿಂಗರಾಜು ಕೆ.ಪಿ. ಯವರಿಗೆ ಪ್ರಾಮಾಣಿಕ ಸೇವೆ, ಸಲ್ಲಿಸುತ್ತಿರುವ ಸರಳ ನಡೆ ನುಡಿಯ, ಜನಾನುರಾಗಿಯಾಗಿ, ವಿದ್ಯಾನುರಾಗಿಯಾಗಿ ಕರ್ತವ್ಯ ನಿರ್ವಹಿಸಿ ಶಾಲೆಯನ್ನು ಸರ್ವತೋಮುಖ ಅಭಿವೃದ್ಧಿಯೆಡೆಗೆ ಸಾಗಿಸಿದ ಸಾಧನೆಗೆ. ಯೆನಪೋಯ ಮೊೈದ್ದೀನ್ ಕುಂಞ ಮೆಮೋರಿಯಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ “ಯೆನಪೋಯ ಶಿಕ್ಷಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು.
ಶಾಲೆಯನ್ನು ದಾನಿಗಳ ನೆರವಿನಿಂದ ಅಭಿವೃದ್ಧಿ ಪಥದೆಡೆಗೆ ಸಾಗುವಲ್ಲಿ ಕಾರಣಕರ್ತರಾಗಿ, ಶಾಲೆಗೆ ಅಗತ್ಯವಾಗಿ ಬೇಕಾದ ಸುಸ್ಸಜ್ಜಿತ ಶಾಲಾ ಕಟ್ಟಡ, ಇಂಗ್ಲಿಷ್ ಕಲಿಕೆ,ಗುಬ್ಬಚ್ಚಿ ಸ್ಪೀಕಿಂಗ್ ಕಾರ್ಯಕ್ರಮ, ಹೆಣ್ಣುಮಕ್ಕಳ ಹಾಗೂ ವಿಕಲಚೇತನರ ಶಿಕ್ಷಣಕ್ಕೆ ಪ್ರೋತ್ಸಾಹ, ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವುದು ಇತ್ಯಾದಿ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಯಶಸ್ವಿಯಾಗಿ ನಿರ್ವಹಿಸಿದ ಇವರು ತಮ್ಮ ಅದ್ಭುತ ಸಂಘಟನಾ ಸಾಮರ್ಥ್ಯದಿಂದ ಸಮಾಜದ ಮತ್ತು ಶಾಲಾ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಗೆ ಈ ಪ್ರಶಸ್ತಿ ಸಂದಿರುತ್ತದೆ.
ಇವರು ಪ್ರಸ್ತುತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ನಾಮನಿರ್ದೇಶಿತ ಉಪಾಧ್ಯಕ್ಷರಾಗಿರುವ ಇವರು ಉತ್ತಮ ಸಂಘಟಕರು ಆಗಿರುತ್ತಾರೆ.

Previous post

ನೂಜಿಬಾಳ್ತಿಲ: ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ-ಸಮಿತಿ ರಚನೆ

Next post

ಶ್ರೀರಾಮ ಶಾಲೆ ನೆಲ್ಯಾಡಿಯ ಆಡಳಿತ ಮಂಡಳಿಯ ಸದಸ್ಯ ಗೋಪಾಲಕೃಪ್ಣ ಪರಂತಮೂಲೆ ಹೃದಯಾಘಾತದಿಂದ ನಿಧನ

Leave a Reply

You May Have Missed

error: Content is protected !!