ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಗುರುದೇವ ಮಠದಲ್ಲಿ ಪುರ ಪ್ರವೇಶ

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಗುರುದೇವ ಮಠದಲ್ಲಿ ಪುರ ಪ್ರವೇಶ

ನೇಸರ ಜು.13: ಶ್ರೀರಾಮ ಮಹಾ ಸಂಸ್ಥಾನದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ದೇವರಗುಡ್ಡ ಗುರುದೇವ ಮಠದ ಪುರಾತನ ಶ್ರೀ ದೇವಲಿಂಗೇಶ್ವರ ದೇವಾಲಯದಿಂದ ವೈಭವದ ಮೆರವಣಿಗೆಯ ಮೂಲಕ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಗುರುದೇವ ಮಠದಲ್ಲಿ ಪುರ ಪ್ರವೇಶ ಮಾಡಿದರು. ಭಕ್ತವೃಂದದವರು ಗುರುಗಳನ್ನು ಸ್ವಾಗತಿಸಿದರು. ಬೆಂಗಳೂರಿನ ಆಗಮ ಪ್ರವೀಣ ಲಕ್ಷ್ಮೀಪತಿ ಗೋಪಾಲಾಚಾರ್ಯರ ಪೌರೋಹಿತ್ಯದಲ್ಲಿ ಚಾತುರ್ಮಾಸ್ಯದ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು.
ಶ್ರೀಗಳ ಗುರುಪೂರ್ಣಿಮೆಯ ವ್ಯಾಸ ಪೀಠದ ಪೀಠಾರೋಹಣ, ಗುರುಪಾದುಕಾಪೂಜೆ, ಆಶೀರ್ವಚನ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ನಡೆದವು.

Leave a Reply

You May Have Missed

error: Content is protected !!