ಸವಣಾಲು ಬಳಿ ಫಲ್ಗುಣಿ ನದಿಯಲ್ಲಿ ತೇಲಿ ಬಂದ ಕಾಡುಕೋಣದ ಕಳೇಬರ

ಸವಣಾಲು ಬಳಿ ಫಲ್ಗುಣಿ ನದಿಯಲ್ಲಿ ತೇಲಿ ಬಂದ ಕಾಡುಕೋಣದ ಕಳೇಬರ

ನೇಸರ ಜು.13: ನದಿಯಲ್ಲಿ ಕಾಡುಕೋಣದ ಮೃತ ದೇಹ ತೇಲಿ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲಿನಲ್ಲಿ ನಡೆದಿದೆ.

ಸುಲ್ಯೋಡಿ ಹಿತ್ತಿಲ ಪೇಲದಿಂದ ಹರಿದು ಬರುತ್ತಿರುವ ಫಲ್ಗುಣಿ ನದಿಯಲ್ಲಿ ಹೆಬ್ಬರಹಿತ್ತಿಲು ಎಂಬಲ್ಲಿ ನದಿಯಲ್ಲಿ ಕಾಡುಕೋಣದ ಮೃತದೇಹ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ನದಿ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಈಗಾಗಲೇ ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಯಾವ ಕಾರಣದಿಂದ ಸಾವನ್ನಪ್ಪಿದೆ ಎಂದು ತಿಳಿದುಬರಬೇಕಾಗಿದೆ.

Leave a Reply

You May Have Missed

error: Content is protected !!