ಅಡ್ಡಹೊಳೆ: ಕಾರು ಹಾಗೂ ಬಸ್ಸು ಡಿಕ್ಕಿ ➽ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯ

ಅಡ್ಡಹೊಳೆ: ಕಾರು ಹಾಗೂ ಬಸ್ಸು ಡಿಕ್ಕಿ ➽ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯ

ನೇಸರ ಆ.02: ಕಾರು ಹಾಗೂ ಬಸ್ಸು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ರಾ.ಹೆ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಆ.2 ರ ಸಂಜೆ ಸಂಭವಿಸಿದೆ.
ಗಾಯಾಳುಗೊಂಡವರನ್ನು ಪುತ್ತೂರು ಖಾಸಗಿ ಕಾಲೇಜಿನ ಉಪನ್ಯಾಸಕ ವಿಟ್ಲ ಮೂಲದ ಗೋವಿಂದರಾಜ್ ಶರ್ಮಾ(32) ಹಾಗೂ ರಾಮಕುಂಜ ಮೂಲದ ಓಂಕಾರ ಪ್ರಸಾದ್ (30) ಎಂದು ಹೇಳಲಾಗಿದೆ.
ಇವರಿಬ್ಬರೂ ಸಕಲೇಶಪುರ ಕಡೆಯಿಂದ ರಾಮಕುಂಜ ಕಡೆ ಬರುವಾಗ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುವ ಕೆಎಸ್ಆರ್ ಟಿಸಿ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ
ಗೋವಿಂದರಾಜ್ ಶರ್ಮಾ ಕಾಲಿಗೆ ಗಂಭೀರ ಗಾಯಗಳಾಗಿದೆ ಹಾಗೂ ಓಂಕಾರ ಪ್ರಸಾದ್ ತಲೆಗೆ ಗಾಯಗಳಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯೇಕ ಪ್ರಕರಣ : ಇದೇ ಸ್ಥಳದಲ್ಲಿ ಮಧ್ಯಾಹ್ನ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಾದ ವಿದ್ಯಾರ್ಥಿಗಳ ಪೈಕಿ ಬೆಂಗಳೂರು ಮೂಲದ ಭರತ್ (25) ಕಾಲಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಕೂಡ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶಿರಾಡಿ 108 ಆಂಬುಲೆನ್ಸ್ ಸಿಬ್ಬಂದಿ ಸಂತೋಷ್ ಹಾಗೂ ಭೀಮನಾ ಗೌಡ ಸಹಕರಿಸಿದರು.

Leave a Reply

You May Have Missed

error: Content is protected !!