ಷೇರು ಮಾರುಕಟ್ಟೆ ಹುಡುಕೆಯ ಮಾಹಿತಿ ಕಾರ್ಯಾಗಾರ

ಷೇರು ಮಾರುಕಟ್ಟೆ ಹುಡುಕೆಯ ಮಾಹಿತಿ ಕಾರ್ಯಾಗಾರ

ನೇಸರ ಆ.20: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಷೇರು ಮಾರುಕಟ್ಟೆಯ ಹೂಡಿಕೆಯ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಆ.18ರ ಶನಿವಾರ ಕಾಲೇಜಿನ ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ ಟಿ ವಹಿಸಿದರು. ವಾಣಿಜ್ಯ ಉಪನ್ಯಾಸಕರಾದ ರಮಾನಾಥ್ ಕಾರ್ಯಕ್ರಮವನ್ನು ಸಂಯೋಜಿಸಿದರು, ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿರುವ ಪ್ರಮೀಳಾ ಎನ್ ನಿರ್ವಹಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮೋಹಿತ್ ಎಂ ಬಿ ಎ ,AMFI (ಬಿಜಿನೆಸ್ ಪಾರ್ಟ್ನರ್ ಮೋತಿಲಾಲ್ ಓಸ್ವಲ್ ಪ್ರೈವೇಟ್ ಲಿಮಿಟೆಡ್) ಮತ್ತು ಜೀವನ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾಬೀಟಿ, ಡಾ.ನೀತುಸೂರಜ್, ಶ್ರೀಮತಿ ರಮ್ಯ ಎಂ ಇವರು ಭಾಗವಹಿಸಿದರು.

Leave a Reply

You May Have Missed

error: Content is protected !!