2022ರ -ವರ್ಷದ ಕ್ಯಾಲೆಂಡರ್ ಬಿಡುಗಡೆ

2022ರ -ವರ್ಷದ ಕ್ಯಾಲೆಂಡರ್ ಬಿಡುಗಡೆ

ನೇಸರ ಡಿ.3: ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ 2022ರ ವರ್ಷದ ವಾರ್ಷಿಕ ಕ್ಯಾಲೆಂಡರನ್ನು ದಿನಾಂಕ 11-12-21ರಂದು ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣಪ್ಪರವರು ಮಾತನಾಡಿ ನಮ್ಮ ಸಂಘದ ವತಿಯಿಂದ 2022ನೇ ವಾರ್ಷಿಕ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲು ಸಂತೋಷಿಸುತ್ತೇವೆ. ಇದರಿಂದ ಸದಸ್ಯರಿಗೆ ತುಂಬಾ ಪ್ರಯೋಜನವಾಗಲಿದೆ ಸಂಘದ ಕಚೇರಿ ದಿನ,ರಜಾದಿನಗಳನ್ನು ತಿಳಿಯಲು ಅನುಕೂಲವಾಗಲಿದೆ. ನಮ್ಮ ಸಂಘದ ಕಾರ್ಯವ್ಯಾಪ್ತಿಯಲ್ಲಿ ನಡೆಯುವ ವಿಶೇಷ ಜಾತ್ರೆ, ಹಬ್ಬ, ಹರಿದಿನಗಳನ್ನು ಸಾಧ್ಯವಾದಷ್ಟು ನಮೂದಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಿವಪ್ರಸಾದ್ ಪುತ್ತಿಲ, ಜಯಚಂದ್ರ ಪೂಜಾರಿ, ಕುಶ ಕುಮಾರ್, ಸೀತಾರಾಮ.ಡಿ.ಪಿ, ಜಗನ್ನಾಥ.ಜಿ, ಕುಕ್ಕ.ಎನ್, ಸೀತಮ್ಮ, ಸವಿತಾ.ಸಿ.ಜಿ, ವಲಯ ಮೇಲ್ವಿಚಾರಕರಾದ ಪ್ರದೀಪ್.ಕೆ ಮುಖ್ಯಕಾರ್ಯನಿರ್ವಾಹಕ ಸೋಮಸುಂದರ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!