ಚಾರ್ಮಾಡಿ ಘಾಟ್: ಆಂಬುಲೆನ್ಸ್-ಆಟೋ ಮುಖಾಮುಖಿ; ನಾಲ್ವರು ಪಾರು

ಚಾರ್ಮಾಡಿ ಘಾಟ್: ಆಂಬುಲೆನ್ಸ್-ಆಟೋ ಮುಖಾಮುಖಿ; ನಾಲ್ವರು ಪಾರು

ಚಾರ್ಮಾಡಿ : ಇಲ್ಲಿನ ಘಾಟಿಯ ರಸ್ತೆ ತಿರುವಿನಲ್ಲಿ ಗುರುವಾರ ಆಂಬುಲೆನ್ಸ್ ಮತ್ತು ಆಟೋ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಆಟೋದಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಮೂಡಿಗೆರೆಗೆ ರೋಗಿಯನ್ನು ಬಿಟ್ಟು ಹೋಗುತ್ತಿದ್ದ ಆಂಬುಲೆನ್ಸ್ ನ ಚಾಲಕನ ನಿಯಂತ್ರಣ ತಪ್ಪಿ ಘಾಟ್ ನ ಒಂದನೇ ತಿರುವಿನಲ್ಲಿ ಆಟೋಗೆ ಢಿಕ್ಕಿ ಹೊಡೆದ ಪರಿಣಾಮ ಆಟೋದಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಬಣಕಲ್ ಪಟ್ಟಣದ ಆಟೋ ವಾಗಿದ್ದು, ಆಟೋದಲಿದ್ದ ಪ್ರಯಾಣಿಕರು ಧರ್ಮಸ್ಥಳ ಕ್ಕೆ ಹೋಗಿ ದರ್ಶನ ಮುಗಿಸಿ ಬರುವಾಗ ಅಪಘಾತ ನಡೆದಿದೆ. ವಾಹನಗಳು ಮುಖಾಮುಖಿ ಢಿಕ್ಕಿ ಆದುದರಿಂದ ಎರಡೂ ವಾಹನಗಳು ಜಖಂ ಗೊಂಡಿದೆ.

Leave a Reply

You May Have Missed

error: Content is protected !!