ಬೆಳ್ತಂಗಡಿ: ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

ಬೆಳ್ತಂಗಡಿ: ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಸಮೀಪದ ಏಳೂವರೆ ಹಳ್ಳದ ಕಲ್ಲಂಡ ಎಂಬಲ್ಲಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆಯ ಪದವಿ ಪೂರ್ವ ಕಾಲೇಜೊಂದರ ವಿದ್ಯಾರ್ಥಿ ವಿವೇಕ್ (17) ಈ ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿ.

ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ತನ್ನ ಸ್ನೇಹಿತರ ಜತೆ ಎರ್ಮಾಯಿ ಫಾಲ್ಸ್ ಗೆ‌ ಹೋಗಿ, ತೊಟ್ಲಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಮಯ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಕಲ್ಲಂಡ ಪರಿಸರದ ತೊಟ್ಲಾಯಿ ಗುಂಡಿ ಫಾಲ್ಸ್ ಗೆ ಬರುವವರು ಸ್ನಾನಕ್ಕೆ ಇಳಿಯುವುದು ಸಾಮಾನ್ಯ. ಈ ಗುಂಡಿಯಲ್ಲಿ ಹೂಳು ತುಂಬಿದ್ದು ಅಷ್ಟೊಂದು ಆಳ ಇರಲಿಲ್ಲ. ಆದರೆ ಈ ವರ್ಷದ ಮಳೆಗೆ ಹೂಳು ಕೊಚ್ಚಿ ಹೋಗಿ ಗುಂಡಿ ಆಳವಾಗಿದೆ. ಇಲ್ಲಿ ಸ್ನಾನ ಮಾಡುವ ಸಮಯ ಕಿರುಚಾಟ, ಬೊಬ್ಬೆ ಹೊಡೆಯುವುದು ಇತ್ಯಾದಿ ಪ್ರವಾಸಿಗರು ಮಾಡುತ್ತಾ ಇರುವುದರಿಂದ ಸ್ಥಳೀಯರು ಈ ಬಗ್ಗೆ ಹೆಚ್ಚಾಗಿ ಗಮನಹರಿಸುವುದಿಲ್ಲ.
ಸ್ಥಳೀಯರು ಮುನ್ನೆಚ್ಚರಿಕೆ ಹೇಳಿದರು ಪ್ರವಾಸಿಗರು ಆ ಬಗ್ಗೆ ಗಮನ ಹರಿಸದೆ ನೀರಿಗೆ ಇಳಿಯುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರ ಸಹಕಾರದಿಂದ ಮೃತ ದೇಹವನ್ನು ಮೇಲೆತ್ತಲಾಯಿತು.

Leave a Reply

You May Have Missed

error: Content is protected !!