ಡಿ.4 ಶಾಸ್ತರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ; ಕೆಸರಡೊಂಜಿ ಗೌಜಿ ಕ್ರೀಡಾಕೂಟ

ಡಿ.4 ಶಾಸ್ತರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ; ಕೆಸರಡೊಂಜಿ ಗೌಜಿ ಕ್ರೀಡಾಕೂಟ

ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಪಳ, 6ನೇ ವರ್ಷದ ಸಂಭ್ರಮವಾಗಿ ಕೆಸರು ಗದ್ದೆಯಲ್ಲಿ ಕ್ರೀಡಾಕೂಟ ಮತ್ತು ಮನರಂಜನಾ ಕ್ರೀಡೆ “ಕೆಸರಡೊಂಜಿ ಗೌಜಿ” ಕ್ರೀಡಾಕೂಟ ನಾಳೆ 4/12/2022ನೇ ಭಾನುವಾರ ಬೆಳಿಗ್ಗೆ 9-30 ರಿಂದ ನಡೆಯಲಿದೆ.
ಪುರುಷರ ಕಬಡ್ಡಿ ಪಂದ್ಯಾಟ, ವಾಲಿಬಾಲ್ ಪಂದ್ಯಾಟ, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.
ಬೆಳಿಗ್ಗೆ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡು, ಖ್ಯಾತ ಜ್ಯೋತಿಷಿ ಶ್ರೀಧರ ಗೋರೆ ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ಮಾನ್ಯ ಸಚಿವರಾದ ಎಸ್.ಅಂಗಾರ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೊದಲಾದವರು ಭಾಗವಹಿಸಲಿದ್ದಾರೆ, ಅನಿಲ್ ರೈ ಹಾರ್ಪಳ ಸಬಾಧ್ಯಕ್ಷತೆ ವಹಿಸಲಿದ್ದಾರೆ.

Leave a Reply

You May Have Missed

error: Content is protected !!