ಸ್ಕೂಟಿಯಲ್ಲಿದ್ದ ಚಿನ್ನಾಭರಣ ಕಳವು

ಸ್ಕೂಟಿಯಲ್ಲಿದ್ದ ಚಿನ್ನಾಭರಣ ಕಳವು

ಕಾಪು: ಸ್ಕೂಟಿಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಖರೀದಿಗೆಂದು ಅಂಗಡಿಗೆ ತೆರಳಿದ್ದ ವೇಳೆ ಬೆಸುಗೆ ಹಾಕಿಸಲೆಂದು ಸ್ಕೂಟಿಯ ಢಿಕ್ಕಿಯಲ್ಲಿ ಇರಿಸಿದ್ದ ಚಿನ್ನಾಭರಣವನ್ನು ಅಪರಿಚಿತರು ಕಳವುಗೈದ ಘಟನೆ ಶುಕ್ರವಾರ ಸಂಜೆ ಕೊಪ್ಪಲಂಗಡಿಯಲ್ಲಿ ನಡೆದಿದೆ.

ಉಡುಪಿ ಶಿವಳ್ಳಿಯ ಪೂಜಾ ಅವರು ತನ್ನ ದೊಡ್ಡಮ್ಮನ ಮಗಳಾದ ಉಷಾ ಅವರೊಂದಿಗೆ ತನ್ನ ಡಿಯೋ ಸ್ಕೂಟರ್‌ನಲ್ಲಿ ಉಡುಪಿಯಿಂದ ಕಾಪುವಿಗೆ ಬಂದು ಮೋರ್‌ ಮಳಿಗೆಯಲ್ಲಿ ಪೆನ್ಸಿಲ್‌ ಸೆಟ್‌ ತೆಗೆದುಕೊಳ್ಳುವುದಕ್ಕಾಗಿ ತೆರಳಿದ್ದರು. ಬಳಿಕ ಸ್ಟೇಷನರಿ ಅಂಗಡಿಗೆ ಹೋಗಿ ಅಲ್ಲಿ ಪೆನ್ಸಿಲ್‌ ತೆಗೆದುಕೊಂಡು ಸ್ಕೂಟರ್‌ ಇಟ್ಟಲ್ಲಿಗೆ ಹೋಗಿ ಮೊಬೈಲ್‌ ಇಡಲೆಂದು ಢಿಕ್ಕಿ ತೆರೆದಾಗ ಅದರಲ್ಲಿ ಇಟ್ಟಿದ್ದ ಚಿನ್ನದ ಸರ ಹಾಗೂ ಪೆಂಡೆಂಟ್‌ ಇದ್ದ ಸಣ್ಣ ಪರ್ಸ್‌ ನಾಪತ್ತೆಯಾಗಿತ್ತು. ಸುಮಾರು 16 ಗ್ರಾಂ ತೂಕದ 48 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಇದಾಗಿತ್ತು.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!