ಕಡಬ: ಆನೆ ದಾಳಿಗೆ ಇಬ್ಬರು ಮೃತ್ಯು

ಕಡಬ: ಆನೆ ದಾಳಿಗೆ ಇಬ್ಬರು ಮೃತ್ಯು

ಕಡಬ: ಬೆಳ್ಳಂ ಬೆಳಗ್ಗೆ ಆನೆ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪದಲ್ಲಿ ಸಂಭವಿಸಿದೆ.

ರಂಜಿತಾ(21) ಹಾಗೂ ರಮೇಶ್ ರೈ ನೈಲ(55) ಮೃತಪಟ್ಟವರು.
ರಂಜಿತಾ ಪೇರಡ್ಕ ಹಾಲು ಸೊಸೈಟಿ ಉದ್ಯೋಗಿಯಾಗಿದ್ದು, ಬೆಳಗ್ಗೆ ಸೊಸೈಟಿಗೆ ತೆರಳುವ ವೇಳೆ ಮನೆ ಸಮೀಪ ಆಕೆಯ ಮೇಲೆ ಆನೆ ದಾಳಿ ನಡೆಸಿದೆ. ಆಕೆ ಬೊಬ್ಬೆ ಹೊಡೆದ ವೇಳೆ ಅಲ್ಲಿಗೆ ರಕ್ಷಿಸಲು ಬಂದ ರಮೇಶ್ ಎಂಬವರ ಮೇಲೂ ಆನೆ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಯುವತಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಡಾನೆಗಳ ಹಾವಳಿ ಮುಂದುವರಿದಿದೆ.

Leave a Reply

You May Have Missed

error: Content is protected !!