ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ ನಿಯಮಿತ ಕಚೇರಿಯಲ್ಲಿ ಮಹಿಳಾ ದಿನಾಚರಣೆ – ಮಹಿಳಾ ಸಾಧಕಿಗೆ ಗೌರವಾರ್ಪಣೆ

ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ ನಿಯಮಿತ ಕಚೇರಿಯಲ್ಲಿ ಮಹಿಳಾ ದಿನಾಚರಣೆ – ಮಹಿಳಾ ಸಾಧಕಿಗೆ ಗೌರವಾರ್ಪಣೆ

ಮಾರ್ಚ್ 8 ರಿಂದ ಮಾರ್ಚ್ 10 ರವರೆಗೆ ಮೂರು ದಿನಗಳಲ್ಲಿ ಠೇವಣಿ ನೀಡುವ ಮಹಿಳೆಯರಿಗೆ ವಿಶೇಷ ಬಡ್ಡಿದರ ಹಾಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುವುದು – ಉಷಾ ಅಂಚನ್

ನೆಲ್ಯಾಡಿ: ಇಲ್ಲಿನ ಕಾಮಧೇನು ಮಹಿಳಾ ಸಹಕಾರಿ ಸಂಘ ನಿಯಮಿತ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.

ದೀಪ ಪ್ರಜ್ವಲಿಸುವ ಮೂಲಕ ಸ್ವ ಉದ್ಯೋಗ ನಡೆಸುತ್ತಿರುವ ಸಾಂದ್ರ ಬ್ಯೂಟಿ ಪಾರ್ಲರ್ ನ ಶ್ರೀಮತಿ ವಿ.ಎ ರೋಸಮ್ಮ ಚಾಲನೆ ನೀಡಿ ಶುಭ ಹಾರೈಸಿದರು.
ಕಾಮಧೇನು ಮಹಿಳಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರಿಗಾಗಿ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಮಹಿಳೆಯರು ಯಾವತ್ತು ಅಬಲೆಯರಲ್ಲ ಸಬಲೆಯರು, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರಬೇಕು ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಸಹಕಾರಿ ಸಂಘ ಮಾರ್ಚ್ 8 ರಿಂದ ಮಾರ್ಚ್ 10 ರವರೆಗೆ ಮೂರು ದಿನಗಳಲ್ಲಿ ಠೇವಣಿ ನೀಡುವ ಮಹಿಳೆಯರಿಗೆ ವಿಶೇಷ ಬಡ್ಡಿದರ ಹಾಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬಳು ಸಹಕಾರಿ ಸಂಘದ ಪಿಗ್ಮಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಸವಿತಾ ಜೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ ಶೈನ್, ಕಾರ್ಯದರ್ಶಿ ಶ್ರೀಮತಿ ಚೈತನ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಸೇವಾ ಪ್ರತಿನಿಧಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ದಿವ್ಯ ಪ್ರಾರ್ಥಿಸಿದರು, ಸಹಕಾರಿ ಸಂಘದ ಲೆಕ್ಕಾಧಿಕಾರಿಯಾದ ಹರ್ಷಿತ ನಿರೂಪಿಸಿದರು, ಸ್ವಾತಿ ಕೆ ವಂದಿಸಿದರು.

Leave a Reply

You May Have Missed

error: Content is protected !!