ಶ್ರೀವಿದ್ಯಾಪ್ರಸನ್ನ ಶ್ರೀಪಾದರ ಆಶೀರ್ವಾದ ಪಡೆದ ಸಚಿವ ಡಾ.ಅಶ್ವಥ್ ನಾರಾಯಣ್ ಕುಟುಂಬ

ಶ್ರೀವಿದ್ಯಾಪ್ರಸನ್ನ ಶ್ರೀಪಾದರ ಆಶೀರ್ವಾದ ಪಡೆದ ಸಚಿವ ಡಾ.ಅಶ್ವಥ್ ನಾರಾಯಣ್ ಕುಟುಂಬ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಸಿ.ಎನ್. ಅವರು ಕುಟುಂಬ ಸಮೇತ ಮಂಗಳವಾರ ಭೇಟಿ ನೀಡಿ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರ ಆಶೀರ್ವಾದ ಪಡೆದರು.

ಬಳಿಕ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ನಂತರ ಕುಟುಂಬ ಸಮೇತರಾಗಿ ಮಠದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು.

ಮಠದ ಅರ್ಚಕರು ಪೂಜಾ ವಿಧಾನಗಳನ್ನು ನೆರವೇರಿಸಿದರು. ಸಚಿವ ಅಶ್ವಥ್ ನಾರಾಯಣ್ ಅವರ ಪತ್ನಿ ಶೃತಿ ಅಶ್ವಥ್ ನಾರಾಯಣ್, ಪುತ್ರಿ ಆಕಾಂಕ್ಷ, ಪುತ್ರ ಅಮೋಘ್, ಸಹೋದರ ಸತೀಶ್ ಜತೆಗಿದ್ದರು.

Leave a Reply

You May Have Missed

error: Content is protected !!