ಪುತ್ತೂರು ದೇವಳ ಬಳಿಯ ಕೆರೆಯಲ್ಲಿ ಪುತ್ತೂರು ದರ್ಬೆ ನಿವಾಸಿ ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು ಅವರ ಮೃತ ದೇಹ ಪತ್ತೆ…!!!

ಪುತ್ತೂರು ದೇವಳ ಬಳಿಯ ಕೆರೆಯಲ್ಲಿ ಪುತ್ತೂರು ದರ್ಬೆ ನಿವಾಸಿ ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು ಅವರ ಮೃತ ದೇಹ ಪತ್ತೆ…!!!

ನೇಸರ ಡಿ.30: ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಭಾಗದ ಕಂಬಳ ಗದ್ದೆಯಲ್ಲಿರುವ ಕೆರೆಯಲ್ಲಿ ವ್ಯಕ್ತಿಯ ಚಪ್ಪಲಿ, ಕೆರೆ ಪಕ್ಕ ಸ್ಕೂಟರ್ ಪತ್ತೆ ಹಿನ್ನಲೆಯಲ್ಲಿ ವ್ಯಕ್ತಿ ಕೆರೆಯಲ್ಲಿ ಬಿದ್ದು ಕಣ್ಮರೆಯಾಗಿದ್ದಾರೆಂದು ಶಂಕೆ ವ್ಯಕ್ತಪಡಿಸಿ ಅಗ್ನಿಶಾಮಕ ಪೊಲೀಸರು ಕೆರೆ ಪರಿಶೀಲನೆ ನಡೆಸಿದಾಗ ಪುತ್ತೂರು ದರ್ಬೆ ನಿವಾಸಿ ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು ಅವರ ಮೃತ ದೇಹ ಪತ್ತೆಯಾಗಿದೆ.
ಪುತ್ತೂರು ಅಗ್ನಿಶಾಮಕದಳದ ರುಕ್ಮಯ ಗೌಡರವರ ನೇತೃತ್ವದಲ್ಲಿ ಕೃಷ್ಣ ಜಾಲಿಬೇರ, ತೌಸಿಪ್ ಯಾನೆ ಮುಲ್ಲಾ ಅವರು ಗರುಡಪಾತಾಳದ ಮೂಲಕ ಪತ್ತೆ ಮಾಡಿ,ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.
ಮೃತರು ಪತ್ನಿಮತ್ತುಎರಡು ಮಕ್ಕಳು,ಬಂಧುಬಳಗವನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

You May Have Missed

error: Content is protected !!