ನೆಲ್ಯಾಡಿ ಜೇಸಿ ಘಟಕದ ಮಾಸ ಪತ್ರಿಕೆ ಪ್ರಗತಿ 2023 ಬಿಡುಗಡೆ

ನೆಲ್ಯಾಡಿ ಜೇಸಿ ಘಟಕದ ಮಾಸ ಪತ್ರಿಕೆ ಪ್ರಗತಿ 2023 ಬಿಡುಗಡೆ

ನೆಲ್ಯಾಡಿ: ನೆಲ್ಯಾಡಿ ಜೇಸಿ ಘಟಕದ ಮಾಸ ಪತ್ರಿಕೆ ಪ್ರಗತಿ 2023ನ್ನು ಮಾರ್ಚ್ 31 ರಂದು ನೆಲ್ಯಾಡಿ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮುಖ್ಯ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಸಂಘದ ಹಿರಿಯ ಸಿಬ್ಬಂದಿ ಮತ್ತು ಜೇಸಿ ಸದಸ್ಯ ಜೇಸಿ ಮಹೇಶ್ ಎಂ.ಟಿ ಇವರು ಪ್ರಗತಿ ಮಾಸ ಪತ್ರಿಕೆನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಪ್ರಗತಿ ಮಾಸ ಪತ್ರಿಕೆ ಜೇಸಿಯಾ ಅನೇಕ ಮಾಹಿತಿಗಳನ್ನು, ಜೇಸಿ ಸಮಾಚಾರವನ್ನು, ಬೇರೆ ಬೇರೆ ಕಾರ್ಯಕ್ರಮಗಳ, ಘಟನೆಗಳ ಸಾಕ್ಷ್ಯ ಚಿತ್ರಗಳನ್ನು ಹೊಂದಿದ್ದು ಎಲ್ಲಾ ಸದಸ್ಯರು ಇದನ್ನು ಓದಿ ಜೇಸಿ ಮಾಹಿತಿಯನ್ನು ತಮ್ಮಲ್ಲಿ ಹೆಚ್ಚಿಸಿಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು.

ನೆಲ್ಯಾಡಿ ಜೇಸಿ ಘಟಕದ ಅಧ್ಯಕ್ಷ ಜೇಸಿ ದಯಾಕರ್ ಕ್ಲಪ್ತ ಸಮಯಕ್ಕೆ ಪ್ರಗತಿ ಮಾಸಪತ್ರಿಕೆಯನ್ನು ಬಿಡುಗಡೆಗೊಳಿಸುತ್ತಿರುವುದು ಘಟಕದ ಹೆಮ್ಮೆಯ ಒಂದು ಸಂಗತಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜೇಸಿ ಪೂರ್ವ ರಾಜ್ಯ ಉಪಾಧ್ಯಕ್ಷ ಜೇಸಿ ಹೆಚ್‌ ಜಿ ಯಫ್ ರವೀಂದ್ರ ಟಿ, ಪ್ರಗತಿ ಪತ್ರಿಕೆಯ ಸಂಪಾದಕ ಜೇಸಿ ವಿನಯ ಕುಮಾರ್, ಸದಸ್ಯರುಗಳಾದ ಜೇಸಿ ಮುಕುಂದ ಪ್ರಸಾದ್, ಜೇಸಿ ರೋಷನ್ ಕುಮಾರ್, ಜೇಸಿ ಸಂದೀಪ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.

Previous post

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜರ್ ನ ಅಧ್ಯಕ್ಷರಾಗಿ ಸೀನಿಯರ್ ನಾರಾಯಣ.ಎನ್ ಬಲ್ಯ, ಕಾರ್ಯದರ್ಶಿಯಾಗಿ ಸೀನಿಯರ್ ವಿಶ್ವನಾಥ್ ಶೆಟ್ಟಿ.ಕೆ

Next post

ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ; ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ

Leave a Reply

You May Have Missed

error: Content is protected !!