ನಿಡ್ಲೆ ಗ್ರಾಮದ ದೀಪಿಕಾ ರವರ ಚಿಕಿತ್ಸೆಗಾಗಿ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ)ಕರ್ನಾಟಕ ಇವರಿಂದ ನಿಧಿ ಸಂಗ್ರಹ

ನಿಡ್ಲೆ ಗ್ರಾಮದ ದೀಪಿಕಾ ರವರ ಚಿಕಿತ್ಸೆಗಾಗಿ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ)ಕರ್ನಾಟಕ ಇವರಿಂದ ನಿಧಿ ಸಂಗ್ರಹ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ (ರಿ)ಕರ್ನಾಟಕ ಇವರಿಂದ ಸೇವಾಯೋಜನೆ ವಿತರಣೆ ಸಹಾಯಹಸ್ತ ಲೋಕಸೇವಾ ಚಾರಿ ಟೇಬಲ್ ಟ್ರಸ್ಟ್, (ರಿ ) ದ.ಕ ಕರ್ನಾಟಕ ಇವರ ನೇತ್ರತ್ವದಲ್ಲಿ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಬ್ರಹ್ಮಕಲಶ ಸಂದರ್ಭದಲ್ಲಿ ಅಶಕ್ತರಿಗೆ ನೆರವಾಗಲು ನಿಧಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಅಭಿಯಾನದಲ್ಲಿ ಒಟ್ಟಾದ ಮೊತ್ತ 20500 ರೂ ನ್ನು ಧರ್ಮಸ್ಥಳ ನಿಡ್ಲೆ ಗ್ರಾಮದ ದೀಪಿಕಾ ರವರ ಚಿಕಿತ್ಸೆಗಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಚಂದ್ರಹಾಸ್ ಗುರಿಕಾರ ಹಾಗೂ ಶಶೀಂದ್ರ ಜಂಕಲ ಹಾಗೂ ಟ್ರಸ್ಟಿನ ಗೌರವಾಧ್ಯಕ್ಷ ಉದಯ ಭಟ್, ಅಧ್ಯಕ್ಷ ಡಿ. ಎಸ್ ಒಡ್ಯ ಹಾಗೂ ಸೇವಾಮಾಣಿಕ್ಯರು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಮನೋಹರ್ ಪಲಯಮಜಲು ಸ್ವಾಗತಿಸಿ, ಸಹಕರಿಸಿದ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

Leave a Reply

You May Have Missed

error: Content is protected !!