ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ

ನೇಸರ ಜ.1:ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ ದಿನಾಂಕ 30-12-21ನೇ ಗುರುವಾರ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ದೇವಸ್ಥಾನದಲ್ಲಿ ಗೌರವಾಧ್ಯಕ್ಷರಾದ ಶ್ರೀಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸುಬ್ರಹ್ಮಣ್ಯ ಮಠ ಇವರ ಕೃಪಾ ಆಶೀರ್ವಾದದೊಂದಿಗೆ ಕುಂಟು ಕುಡೇಲು ರಘುರಾಮ ತಂತ್ರಿಗಳ ಪುರೋಹಿತ್ಯದಲ್ಲಿ ನಡೆಯಿತು.

ಬೆಳಗ್ಗೆ ಶ್ರೀದೇವರಿಗೆ ನಿತ್ಯಪೂಜೆ,ನಂತರ ಸಾಮೂಹಿಕ ಪ್ರಾರ್ಥನೆ,ಗಣಹೋಮ,ಸಾನಿಧ್ಯ ಕಲಶ ಪ್ರಾಯಶ್ಚಿತ್ತ ಹೋಮ, ಪ್ರಾಯಶ್ಚಿತ್ತ ಕಲಶಾಭಿಷೇಕ,ಸಾನಿಧ್ಯ ಕಲಶಾಭಿಷೇಕ,ಸಾನಿಧ್ಯ ಹೋಮಾದಿಗಳು ನಡೆದು,ಮಧ್ಯಾಹ್ನಮಹಾಪೂಜೆ,ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಶ್ರೀ ದೇವರ ಸನ್ನಿಧಾನದಲ್ಲಿ ಸಂಜೆ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ, ನಂತರ ಶ್ರೀ ದುರ್ಗಾ ಪೂಜೆ, ಮಹಾರಂಗಪೂಜೆ,ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಿತು.
ವೈದಿಕ ಕಾರ್ಯಕ್ರಮವನ್ನು ತಂತ್ರಿಗಳು ಮತ್ತು ಸಹ ಪುರೋಹಿತರು ನಡೆಸಿಕೊಟ್ಟರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ರಾಕೇಶ್.ಎಸ್,ಕೋಶಾಧಿಕಾರಿ ರವಿಚಂದ್ರ ಹೊಸವಕ್ಲು, ಮಾಜಿ ಅಧ್ಯಕ್ಷ ಶಿವದಾಸ್,ಸುಧೀರ್ ಕುಮಾರ್ ಕೆ.ಎಸ್, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಊರ ಭಗವದ್ಭಕ್ತರು ಉಪಸ್ಥಿತರಿದ್ದು.ಶ್ರೀದೇವರ ಗಂಧ ಪ್ರಸಾದ ಸ್ವೀಕರಿಸಿದರು.
ಜಾಹೀರಾತು


















Leave a Reply