ಗೆಳತಿಯರು ತೀವ್ರ ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಸಾವು; ಧರ್ಮಸ್ಥಳ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು

ಗೆಳತಿಯರು ತೀವ್ರ ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಸಾವು; ಧರ್ಮಸ್ಥಳ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು

ಪಟ್ಟೂರು: ನೆರೆಕೆರೆ ಮನೆಯ ಸ್ನೇಹಿತೆಯರಿಬ್ಬರು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಅವರನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ಘಟನೆ ಎಪ್ರಿಲ್ 6ರಂದು ನಡೆದಿದೆ.

ಮೃತಪಟ್ಟ ಯುವತಿಯರು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಬಾಬು ಹಾಗೂ ಗೀತ ದಂಪತಿಗಳ ಪುತ್ರಿ ರಕ್ಷಿತಾ (22) ಮತ್ತು ಆಕೆಯ ನೆರೆಮನೆಯ ಶ್ರೀನಿವಾಸ ಆಚಾರಿ ಹಾಗೂ ಪಾರ್ವತಿ ದಂಪತಿಗಳ ಪುತ್ರಿ ಲಾವಣ್ಯ (20) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಕೂಡ ಕಳೆದೊಂದು ವರ್ಷದಿಂದ ಅನಾರು ಹಾಗೂ ಮುಂಡೂರುಪಳಿಕೆ-ಉಪ್ಪಾರಪಳಿಕೆ ವಲಯದ ಸೇವಾ ನಿರತೆಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಉತ್ತಮ ಸ್ನೇಹಿತೆಯಾಗಿದ್ದರು. ಭಾನುವಾರ ರಕ್ಷಿತ ಹಾಗೂ ಲಾವಣ್ಯರವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಏಪ್ರಿಲ್ 6ರಂದು ಬೆಳಗ್ಗೆ ರಕ್ಷಿತಾ ಹಾಗೂ ಸಂಜೆ ಲಾವಣ್ಯ ಮೃತಪಟ್ಟಿದ್ದಾರೆ.
ಇಬ್ಬರ ಹೊಟ್ಟೆನೋವಿಗೂ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯಕೀಯ ಪರೀಕ್ಷೆಯ ವರದಿ ನಂತರವೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಯುತಿಯರ ಸಾವಿನ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.
ಒಂದೇ ದಿನ ಯುವತಿಯರಿಬ್ಬರು ಒಂದೇ ಕಾರಣಕ್ಕೆ ಸಾವನ್ನಪ್ಪಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

Leave a Reply

You May Have Missed

error: Content is protected !!