ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

ಕೊಕ್ಕಡ: ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಮೊದಲ ಹಂತದಲ್ಲಿ 4 ಸಿ.ಆರ್.ಪಿ.ಎಫ್ ತುಕಡಿಗಳು ಆಗಮಿಸಿದ್ದು, ಇಂದು ಬೆಳಗ್ಗೆ(ಎ.8) ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರು ಪಥ ಸಂಚಲನ ನಡೆಸಿದರು.

ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥ ಸಂಚಲನ ನಡೆಸಲಾಯಿತು.

ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕರಾದ ಶಿವಕುಮಾರ್, ಧರ್ಮಸ್ಥಳ ಪೊಲೀಸ್‌ ಠಾಣಾಧಿಕಾರಿ ಅನಿಲ್ ಕುಮಾರ್, ಮಹಿಳಾ ಸಬ್ ಇನ್ಸ್ಪೆಕ್ಟರ್ ರೇಣುಕಾ, ಬೆಳ್ತಂಗಡಿ, ವೇಣೂರು, ಪುಂಜಾಲುಕಟ್ಟೆ ಗಳ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು, ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಸಿ.ಆರ್.ಪಿ.ಎಫ್ ತುಕಡಿಗಳ ನೇತೃತ್ವದಲ್ಲಿ ಪಥ‌ಸಂಚಲನ‌ ಮಾಡಿ ಸಾರ್ವಜನಿಕರಲ್ಲಿ ಶಾಂತಿಯುತ ಚುನಾವಣೆ ನಡೆಯುವ ಕುರಿತು ಆತ್ಮ ವಿಶ್ವಾಸ ಮೂಡಿಸಿದ್ದಾರೆ.

Previous post

ಸತತ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಅಂಗಾರರಿಗೆ ಮತ್ತೊಮ್ಮೆ ಅವಕಾಶ ನೀಡಿ : ಮಹಾಬಲ ಪಡುಬೆಟ್ಟು ಮನವಿ

Next post

ಎ.9 ರಂದು(ನಾಳೆ)ನೆಲ್ಯಾಡಿಯಲ್ಲಿ ಸಾರ್ವಜನಿಕರಿಂದ ನಿವೃತ್ತ ದೈಹಿಕ ಶಿಕ್ಷಕ ಜನಾರ್ಧನ ಗೌಡ ಟಿ ಅವರಿಗೆ ಸನ್ಮಾನ

Leave a Reply

You May Have Missed

error: Content is protected !!