ಎ.9 ರಂದು(ನಾಳೆ)ನೆಲ್ಯಾಡಿಯಲ್ಲಿ ಸಾರ್ವಜನಿಕರಿಂದ ನಿವೃತ್ತ ದೈಹಿಕ ಶಿಕ್ಷಕ ಜನಾರ್ಧನ ಗೌಡ ಟಿ ಅವರಿಗೆ ಸನ್ಮಾನ

ಎ.9 ರಂದು(ನಾಳೆ)ನೆಲ್ಯಾಡಿಯಲ್ಲಿ ಸಾರ್ವಜನಿಕರಿಂದ ನಿವೃತ್ತ ದೈಹಿಕ ಶಿಕ್ಷಕ ಜನಾರ್ಧನ ಗೌಡ ಟಿ ಅವರಿಗೆ ಸನ್ಮಾನ

ನೆಲ್ಯಾಡಿ: ನೆಲ್ಯಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 32 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜನಾರ್ದನ ಗೌಡ ಟಿ., ಅವರಿಗೆ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯ ಪೂರ್ವ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆಲ್ಯಾಡಿಯ ವಿದ್ಯಾಭಿಮಾನಿಗಳ ವತಿಯಿಂದ ಸಾರ್ವಜನಿಕ ಸನ್ಮಾನ “ಗುರುಭ್ಯೋ ನಮಃ” ಎ.9ರಂದು ಸಂಜೆ 6 ಗಂಟೆಯಿಂದ ನೆಲ್ಯಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಸಂಜೆ ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇವರಿಂದ ಸುಗಮ ಸಂಗೀತ, ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮಮತ್ತು ಸಾರ್ವಜನಿಕ ಸನ್ಮಾನ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದೆರ್, ಕುಡ್ಲ ಇವರಿಂದ “ಅಲೇ ಬುಡಿಯೆರ್‌ಗೆ..!” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

You May Have Missed

error: Content is protected !!