ಪತ್ರಕರ್ತ ಅಶ್ರಫ್ ಆಲಿಕುಂಞಿ ಬೆಳ್ತಂಗಡಿ ಜೆಡಿಎಸ್ ನಿಂದ ಕಣಕ್ಕೆ

ಪತ್ರಕರ್ತ ಅಶ್ರಫ್ ಆಲಿಕುಂಞಿ ಬೆಳ್ತಂಗಡಿ ಜೆಡಿಎಸ್ ನಿಂದ ಕಣಕ್ಕೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಣಕ್ಕಿಳಿಯಲಿದ್ದಾರೆ.

ಅಶ್ರಫ್ ಆಲಿಕುಂಞಿಯವರಿಗೆ ಇಂದು ಪಕ್ಷದ ಹಿರಿಯರ ಸಮ್ಮುಖದಲ್ಲಿ ‘ಬಿ ಫಾರಂ’ ಹಸ್ತಾಂತರಿಸಲಾಗಿದೆ.
ಅಶ್ರಫ್ ಆಲಿಕುಂಞಿ ಮುಂಡಾಜೆ 1998ರಿಂದ ಜೈ ಕನ್ನಡಮ್ಮ ವಾರಪತ್ರಿಕೆ, ಕರಾವಳಿ ಅಲೆ ದೈನಿಕ, ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ವರದಿಗಾರರಾಗಿ, ಪ್ರಸಕ್ತ ಜಯಕಿರಣ ಕನ್ನಡ ಬೆಳಗ್ಗಿನ ದೈನಿಕ ಪತ್ರಿಕೆಯಲ್ಲಿ ಹವ್ಯಾಸಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.‌
ಮುಂಡಾಜೆ ಗ್ರಾಮದ ದಿ. ಆಲಿಕುಂಞಿ ಮತ್ತು ಕೆ ನೆಫೀಸಾ ದಂಪತಿಯ ಪುತ್ರರಾಗಿ ಜನಿಸಿದ ಅವರು ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು. ಪ್ರೌಢ ಶಾಲೆ ವರೆಗಿನ ಶಿಕ್ಷಣವನ್ನು ಮುಂಡಾಜೆಯಲ್ಲಿ, ಬಳಿಕ ವೃತ್ತಿಗೆ ಸಂಬಂಧಿಸಿದ ಅಗತ್ಯ ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡಿದ್ದಾರೆ. ಕಳೆದ 23 ವರ್ಷಗಳಿಂದ ಗ್ರಾಮೀಣ ಪತ್ರಕರ್ತರಾಗಿ, ಅಭಿವೃದ್ಧಿ ಪರ ಮತ್ತು ಮಾನವೀಯ ಪತ್ರಿಕೋಧ್ಯಮದ ಮೂಲಕ ಗಮನಸೆಳೆದಿದ್ದಾರೆ.

Leave a Reply

You May Have Missed

error: Content is protected !!