ಅಕ್ರಮ ಗೋಸಾಗಾಟದ ವಾಹನ ವಶ – ಎರಡು ಗೋವುಗಳ ರಕ್ಷಣೆ

ಅಕ್ರಮ ಗೋಸಾಗಾಟದ ವಾಹನ ವಶ – ಎರಡು ಗೋವುಗಳ ರಕ್ಷಣೆ

ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಖಚಿತ ಮಾಹಿತಿಯನ್ವಯ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಕಾರಾಜೆಯ ಪ್ರದೀಪ್ ಸಿಕ್ವೇರಾ ಚಲಾಯಿಸುತ್ತಿದ್ದ ಪಿಕಪ್ ನಲ್ಲಿ ಯಾವುದೇ ದಾಖಲೆ ಇಲ್ಲದೆ ಎರಡು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಏಪ್ರಿಲ್ 19ರ ರಾತ್ರಿ ಬಿ ಸಿ ರೋಡ್ ನ ನಾರಾಯಣ ಗುರು ವೃತ್ತದ ಸಮೀಪ ಬಂಬಂಟ್ವಾಳ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಆರೋಪಿ ಪ್ರದೀಪ್ ಸಿಕ್ವೇರಾ ಹಾಗೂ ಎರಡು ಜಾನುವಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರಾದ ರಾಮಕೃಷ್ಣ, ಎಚ್‌ ಸಿಗಳಾದ ಮನೋಹರ, ಜಯಕುಮಾರ್, ಪಿಸಿಗಳಾದ ಜಮೀರ್ ಮತ್ತು ರಂಗನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

You May Have Missed

error: Content is protected !!