ಶ್ರೀ ಶಿರಾಡಿ ಧೂಮಾವತಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಧಾನ ಕಟ್ಟೆ ಮಜಲು ಕೌಕ್ರಾಡಿ ಕಡಬ ತಾಲೂಕು: ದೈವಸ್ಥಾನದ ಉಪ ಕಟ್ಟಡ ಚಿಂತನ ಚಾವಡಿಯ ಪ್ರವೇಶೋತ್ಸವ

ಶ್ರೀ ಶಿರಾಡಿ ಧೂಮಾವತಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಧಾನ ಕಟ್ಟೆ ಮಜಲು ಕೌಕ್ರಾಡಿ ಕಡಬ ತಾಲೂಕು: ದೈವಸ್ಥಾನದ ಉಪ ಕಟ್ಟಡ ಚಿಂತನ ಚಾವಡಿಯ ಪ್ರವೇಶೋತ್ಸವ

ನೇಸರ 19: ಶ್ರೀ ಶಿರಾಡಿ ಧೂಮಾವತಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಧಾನ ಕಟ್ಟೆ ಮಜಲು ಕೌಕ್ರಾಡಿ ಕಡಬ ತಾಲೂಕು ದ.ಕ ಇಲ್ಲಿ ನಿರ್ಮಾಣಗೊಂಡ ದೈವಸ್ಥಾನದ ಉಪ ಕಟ್ಟಡ ಚಿಂತನ ಚಾವಡಿಯ ಪ್ರವೇಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರೆವೇರಿತು. ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರ ನೇತೃತ್ವದಲ್ಲಿ ಗ್ರಾಮದ ಭಕ್ತಾದಿಗಳ ಸಹಕಾರದೊಂದಿಗೆ ಬೆಳಿಗ್ಗೆ ಗಣಹೋಮ ನಡೆಸಿ ನಂತರ ಚಿಂತನಾ ಚಾವಡಿಯ ಪ್ರವೇಶೋತ್ಸವವನ್ನು ನಡೆಸಲಾಯಿತು. ಸಂಜೆ ಗಂಟೆ 6.30 ರಿಂದ ದುರ್ಗಾಪೂಜೆ, ಪ್ರಸಾದ ವಿತರಣೆ ನಂತರ ಆನ್ನಸಂತರ್ಪಣೆ ನಡೆಸಲಾಯಿತು. ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಶ್ರೀಧರ ನೂಲಿನ್ನಾಯ ದೋಂತಿಲ ಇವರ ನೇತೃತ್ವದಲ್ಲಿ ನೆರೆವೇರಿತು. ಅಡಳಿತ ಮಂಡಳಿಯ ಅಧ್ಯಕ್ಷರಾದ ಸದಾನಂದ ಗೌಡ, ಕಾರ್ಯದರ್ಶಿ ಶಶಿಧರ ಶೆಟ್ಟಿ, ಸರ್ವ ಸದಸ್ಯರು, ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು

Leave a Reply

You May Have Missed

error: Content is protected !!