ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ: “ರಾಷ್ಟ್ರೀಯ ಯುವದಿನ” ಆಚರಣೆ

ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ: “ರಾಷ್ಟ್ರೀಯ ಯುವದಿನ” ಆಚರಣೆ

ನೇಸರ ಜ13: ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ದಿನಾಂಕ 12.1.2022 ರಂದು ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ “ರಾಷ್ಟ್ರೀಯ ಯುವದಿನ” ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಮಾಹಿತಿ ನೀಡಲಾಯಿತು ಮತ್ತು ದೇಶಸೇವೆ ಹಾಗೂ ಸಮಾಜ ಸೇವೆಯಲ್ಲಿ ಯುವಜನತೆ ಪಾತ್ರದ ಬಗ್ಗೆ ಟಾಗ್ ಲೈನ್ ಸ್ಪರ್ಧೆ ಹಾಗೂ ಸ್ವಾಮಿ ವಿವೇಕಾನಂದರ ಬಗ್ಗೆ ಕ್ವಿಜ್ ನ್ನು ನಡೆಸಲಾಯಿತು. ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರು ಅಬ್ರಹಾಂ ವರ್ಗೀಸ್ ರವವರ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಏಲಿಯಾಸ್.ಎಂ.ಕೆ ,ಎನ್ನೆಸ್ಸೆಸ್ ಕಾರ್ಯಕ್ರಮಧಿಕಾರಿ ವಿಶ್ವನಾಥ.ಶೆಟ್ಟಿ.ಕೆ., ಕಾಲೇಜು ಸಂಸತ್ತು ನಾಯಕ ಮಹಮ್ಮದ್ ಸಾಬಿತ್ ಹಾಗೂ ಉಪನ್ಯಾಕರು ಭಾಗವಸಿದರು. ಎನ್ನೆಸ್ಸೆಸ್ ಘಟಕ ನಾಯಕ ವಿನೀತ್ ಮಾಂತೇರೋ ಸ್ವಾಗತಿಸಿ,ನಾಯಕಿ ಭವಿಷ್ಯ ವಂದಿಸಿದರು.

Leave a Reply

You May Have Missed

error: Content is protected !!