ಇಚಿಲಂಪಾಡಿಯ ಮಲ್ಲಿಕಾರ್ಜುನ ಕಲಾ ಸಂಘದಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಮ್ಮನವರಿಗೆ ಬಿಂಬದ ಬೆಳ್ಳಿಯ ಕವಚ ಅರ್ಪಣೆ

ನೇಸರ ಜ14:ದಿನಾಂಕ 14 -01 -2022 ರಂದು ಬೆಳಿಗ್ಗೆ ಗಂಟೆ 10 :30 ಕ್ಕೆ ಇಚಿಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಸೇವೆಯ ಸಹಾಯಾರ್ಥವಾಗಿ ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚಿಲಂಪಾಡಿ ನೂತನವಾಗಿ ರಚಿಸಿರುವ ಶ್ರೀ ದೇವಿಯ ಬಿಂಬದ ಬೆಳ್ಳಿಯ ಕವಚವನ್ನು ಕ್ಷೇತ್ರದ ಅರ್ಚಕರಾದ ಶ್ರೀ ಹರೀಶ್ ಭಟ್ ಇವರ ನೇತೃತ್ವದಲ್ಲಿ, ಬೀಡಿನ ಆಡಳಿತ ಮೊಕ್ತೇಸರರಾದ ಶ್ರೀ ಶುಭಾಕರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ , ದೇವಸ್ಥಾನದ ಆಡಳಿತ ಮಂಡಳಿ , ಊರ ಹತ್ತು ಸಮಸ್ತರು, ಗಣ್ಯರು ಹಾಗು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಅರ್ಪಿಸಲಾಯಿತು















Leave a Reply