ಸರ್ಕಾರಿ ಕೆಲಸದಲ್ಲಿರುವ ವರನನ್ನು ತಿರಸ್ಕರಿಸಿ, ಪಿಕ್‌ ಅಪ್‌ ಚಾಲಕನನ್ನು ಮದುವೆಯಾದ ಯುವತಿ..!!

ಸರ್ಕಾರಿ ಕೆಲಸದಲ್ಲಿರುವ ವರನನ್ನು ತಿರಸ್ಕರಿಸಿ, ಪಿಕ್‌ ಅಪ್‌ ಚಾಲಕನನ್ನು ಮದುವೆಯಾದ ಯುವತಿ..!!

ಸರ್ಕಾರಿ ಕೆಲಸದಲ್ಲಿರುವ ವರನನ್ನು ತಿರಸ್ಕರಿಸಿ ಯುವತಿಯೊಬ್ಬಳು ಪಿಕ್‌ ಅಪ್‌ ವಾಹನ ಚಾಲಕನನ್ನು ಮದುವೆಯಾಗಿರುವ ಘಟನೆ ರಾಜಸ್ಥಾನದ ಚುರುನಲ್ಲಿ ನಡೆದಿದೆ.
ಪಾರ್ವತಿ ಶರ್ಮಾ ಕಳೆದ 8 ವರ್ಷಗಳಿಂದ ಯೋಗೇಂದ್ರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಯೋಗೇಂದ್ರ ಪಿಕ್‌ ಅಪ್‌ ವಾಹನ ಚಾಲಕನಾಗಿದ್ದಾನೆ. ಆದರೆ ಪಾರ್ವತಿ ಮನೆಯವರು ಆಕೆಗಾಗಿ ಸರ್ಕಾರಿ ಕೆಲಸವಿರುವ ವರನನ್ನು ಹುಡುಕಿದ್ದಾರೆ. ಆತನೊಂದಿಗೆ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಯೋಗೇಂದ್ರನನ್ನು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೆ ಪಾರ್ವತಿ ಈ ಹಿಂದೆ ಹೇಳಿದ್ದರೂ, ಅದನ್ನು ಮನೆಯವರು ಕೇಳಿಯೂ ಬಂದ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಇದೇ ಕಾರಣದಿಂದ ಪಾರ್ವತಿ ಮನೆಬಿಟ್ಟು ಯೋಗೇಂದ್ರನ ಜೊತೆ ಜುಲೈ 7 ರಂದು ತಾರಾನಗರದ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.
ಯೋಗೇಂದ್ರನನ್ನು ಮದುವೆಯಾದ ನಂತರ ಪಾರ್ವತಿ ರಕ್ಷಣೆ ಪಡೆಯಲು ಚುರುವಿನ ದುಧ್ವಾ ಖಾರಾದಲ್ಲಿರುವ ಎಸ್ಪಿ ಕಚೇರಿಯನ್ನು ತಲುಪಿದ್ದಾರೆ.
ಈ ಮಧ್ಯೆ ಪಾರ್ವತಿ ಮನೆಯವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!