12 ಲಕ್ಷ ರೂ.ಗಳನ್ನ ಖರ್ಚು ಮಾಡಿ, ಶ್ವಾನವಾಗಿ ಬದಲಾದ ವ್ಯಕ್ತಿ! ; ವಿಡಿಯೊ ವೈರಲ್‌

12 ಲಕ್ಷ ರೂ.ಗಳನ್ನ ಖರ್ಚು ಮಾಡಿ, ಶ್ವಾನವಾಗಿ ಬದಲಾದ ವ್ಯಕ್ತಿ! ; ವಿಡಿಯೊ ವೈರಲ್‌

ಟ್ರೆಂಡ್‌ಗಳನ್ನು ಸೃಷ್ಟಿಸುವ ರೀತಿಯ ಹೊಸ ಹೊಸ ಅವತಾರಗಳನ್ನು ಕೆಲವರು ಇಷ್ಟಪಡೋದು, ಅದಕ್ಕಾಗಿ ಬದಲಾಗೋದನ್ನ ನೋಡಿರುತ್ತೀರಿ, ಆದರೆ ಮನುಷ್ಯನೆಂದಾದರೂ ಶ್ವಾನವಾಗಿ ಬದಲಾಗೋದನ್ನ ನೋಡಿದ್ದೀರಾ? ಜಪಾನ್‌ ಮೂಲದ ವ್ಯಕ್ತಿಯೊಬ್ಬ 12 ಲಕ್ಷ ರೂ.ಗಳನ್ನ ಖರ್ಚು ಮಾಡಿ, ಶ್ವಾನವಾಗಿ ಬದಲಾಗಿದ್ದಾನೆ..!

ಆತನ ವಿಡಿಯೊ ಈಗ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಟೋಕೋ ಎಂಬಾತನಿಗೆ ಮೊದಲಿಂದಲೂ ಶ್ವಾನದ ಜೀವನದ ಅನುಭವವನ್ನು ಪಡೆಯಬೇಕೆಂಬ ಆಸೆ ಇತ್ತಂತೆ. ಈ ಹಿನ್ನೆಲೆಯಲ್ಲಿ ಥೇಟ್‌ ನಿಜವಾದ ಶ್ವಾನದಂತೆಯೇ ಕಾಣುವ ಹೈಪರ್‌ ರಿಯಲಾಸ್ಟಿಕ್‌ ಎನ್ನುವ ಡಾಗ್‌ ಕಾಸ್ಟೂéಮ್‌ ಅನ್ನು 40 ದಿನ ತಯಾರಿಸಿ, ಅದನ್ನು ಧರಿಸಿ ಪಾರ್ಕ್‌ಗೆ ವಾಕಿಂಗ್‌ ಹೋಗಿದ್ದಾರೆ. ಶ್ವಾನವೇ ಎನ್ನುವಷ್ಟು ನೈಜವಾಗಿ ಕಾಣುತ್ತಿರುವ ಆತನೊಂದಿಗೆ ಇತರೆ ಶ್ವಾನಗಳೂ ಬೆರೆಯುವ ವಿಡಿಯೊ ವೈರಲ್‌ ಆಗಿದೆ.

Leave a Reply

You May Have Missed

error: Content is protected !!