ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‍ರವರ ತಾಯಿ ಮೀನಾಕ್ಷಿ ಬಂಟ್ರಿಯಾಲ್ ನಿಧನ

ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‍ರವರ ತಾಯಿ ಮೀನಾಕ್ಷಿ ಬಂಟ್ರಿಯಾಲ್ ನಿಧನ

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಜಯಾನಂದ ಬಂಟ್ರಿಯಾಲ್‍ರವರ ತಾಯಿ, ನೆಲ್ಯಾಡಿ ಗ್ರಾಮದ ಕೆಳಗಿನಪರಾರಿ ನಿವಾಸಿ ಶ್ರೀಮತಿ ಮೀನಾಕ್ಷಿ ಬಂಟ್ರಿಯಾಲ್(91ವ.)ರವರು ಅನಾರೋಗ್ಯದಿಂದ ಆ.22ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಕೃಷಿಕ ಮೋಹನದಾಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಿರಾಡಿ ಶಾಖಾ ಮೇನೇಜರ್ ರತ್ನಾಕರ ಬಂಟ್ರಿಯಾಲ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಪುತ್ರಿಯರಾದ ಶೀಲಾವತಿ, ಕಲಾವತಿ, ಸಂಪದ, ಶಶಿಕಲಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!