ಜೇಸಿಐ ಕೊಕ್ಕಡ ಕಪಿಲ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

ನೇಸರ 24: ಜೇಸಿಐ ಕೊಕ್ಕಡ ಕಪಿಲ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜೂನಿಯರ್ ಜೇಸಿ ಘಟಕ ಉದ್ಘಾಟನಾ ಸಮಾರಂಭ ಸಂತ ಜಾನರ ಹಿ.ಪ್ರಾ.ಶಾಲೆ ಕೌಕ್ರಾಡಿ(ಕೊಕ್ಕಡ)ದಲ್ಲಿ ನಡೆಯಿತು, ಮುಖ್ಯ ಅತಿಥಿ ರೋ. ದಯಾನಂದ ನಾಯಕ್ ಪೂರ್ವಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ ಇವರು ದೀಪ ಬೆಳಗಿಸಿ ಜೇಸಿಐಯ ಮಹತ್ವನ್ನು ಸಭೆಗೆ ತಿಳಿಸಿದರು ಮತ್ತು ಘಟಕಕ್ಕೆ ಶುಭಕೋರಿದರು. ಘಟಕದ ಅಧ್ಯಕ್ಷ ಜೇಸಿ ಗಣೇಶ್. ಕೆ ವರದಿ ವಾಚಿಸಿದರು ಹಾಗೂ ಸಹಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು, ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜೇಸಿ ಶ್ರೀಧರ್ ರಾವ್ ರವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಭೋದಿಸಲಾಯಿತು. ನಿರ್ಗಮನ ಅಧ್ಯಕ್ಷರಿಗೆ ಶಾಲು ಹೋದಿಸಿ ನೆಸಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಜೆಎಫ್ಪಿ ಹೇಮಲತಾ ಪ್ರದೀಪ್ ಪ್ರಮಾಣ ವಚನ ಭೋದಿಸಿದರು. ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಜೇಸಿ ನರಸಿಂಹ ನಾಯಕ್ಗೆ ಅಧಿಕಾರ ಹಸ್ತಾಂತರಿಸಲಾಯಿತು, ನೂತನವಾಗಿ ಆಯ್ಕೆಯಾದ ಜೇಸಿರೆಟ್ ಉಮಾ ರವರ ಪರಿಚಯದೊಂದಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಜೂನಿಯರ್ ಜೇಸಿಗಳಿಗೆ ಪ್ರಮಾಣ ವಚನವನ್ನು ಜೇಸಿಐ ಸೆನೆಟ್ಟರ್ ರೋಯನ್ ಉದಯ ಕ್ರಾಸ್ತಾ ನೆರೆವೇರಿಸಿದರು. ನೂತನ ಜೂನಿಯರ್ ಜೇಸಿ ಅಧ್ಯಕ್ಷರಾದ ಜೇಜೇಸಿ ಸವಿತಾರವರಿಗೆ ಹೂ ನೀಡಿ ಸಭೆಗೆ ಪರಿಚಯಿಸಲಾಯಿತು.















Leave a Reply