ದೇಶದಲ್ಲೇ ಪ್ರಥಮ ಬಾರಿಗೆ ಶೂನ್ಯ ವಿದ್ಯುತ್ ಬಿಲ್ ಬಾಕಿ ಅಭಿಯಾನ : ಗೋಳಿತ್ತೊಟ್ಟು

ದೇಶದಲ್ಲೇ ಪ್ರಥಮ ಬಾರಿಗೆ ಶೂನ್ಯ ವಿದ್ಯುತ್ ಬಿಲ್ ಬಾಕಿ ಅಭಿಯಾನ : ಗೋಳಿತ್ತೊಟ್ಟು

ನೇಸರ 24: ಗೋಳಿತ್ತೊಟ್ಟು ವಿದ್ಯುತ್ ಬಳಕೆದಾರರ ಸಮಾನ್ಯ ಸಭೆಯು ಸತೀಶ್ ರೈ ಕೊಣಾಲುಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗೋಳಿತ್ತೊಟ್ಟಿನಲ್ಲಿ ವಿದ್ಯುತ್ ಶಾಖಾ ಕಛೇರಿ ತೆರೆಯುವ ಬಗ್ಗೆ, ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ತಂತಿಯ ಬದಲಾವಣೆ, ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು, ಮದ್ಯಂತರ ಕಂಬ ಅಳವಡಿಸುವಿಕೆ, ಹೆಚ್ಚಿವರಿ ಸದಸ್ಯರ ಸೇರಿಸುವಿಕೆ, ಖಾಸಗಿಕರಣ ಬಗ್ಗೆ ತೀವ್ರ ವಿರೋಧ, ದೇಶದಲ್ಲೇ ಪ್ರಥಮ ಬಾರಿಗೆ ಶೂನ್ಯ ವಿದ್ಯುತ್ ಬಿಲ್ ಬಾಕಿ ಅಭಿಯಾನದ ಬಗ್ಗೆ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ವೆಂಕಪ್ಪ ಗೌಡ, ಪ್ರವೀಣ್ ಭಂಡಾರಿ ಪುರ, ಪ್ರತಾಪ್ ರೈ ಕುದ್ಮಾರು, ಮನೋಹರ ಜೈನ್ ಅರಂತಬೈಲು ಇವರನ್ನು ಹೂಸ ಸದಸ್ಯರನ್ನಾಗಿ ಸೇರ್ಪಡೆ ಮಾಡಲಾಯಿತು. ಸಭೆಯಲ್ಲಿ ವೆಂಕಪ್ಪ ಗೌಡ ಪೆರ್ಲ, ಕೋರಗಪ್ಪ ಗೌಡ ಕಲ್ಲಡ್ಕ, ಪುರುಷೋತ್ತಮ ಆಚಾರ್ಯ ಪೆರ್ನಾರು, ನೇಮಣ್ಣ ಪೂಜಾರಿ ಪಾಲೇರಿ, ವೆಂಕಪ್ಪ ಗೌಡ ,ನೋಣಯ್ಯ ಗೌಡ, ಸುರೇಶ್ ಬಿ, ಜನಾರ್ಧನ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!