CASBY ಕಂಪನಿಯ ವತಿಯಿಂದ ತುರ್ತುಕ್ರಮದ ಪ್ರಾತ್ಯಕ್ಷತೆ : ಗೋಳಿತ್ತೊಟ್ಟು

CASBY ಕಂಪನಿಯ ವತಿಯಿಂದ ತುರ್ತುಕ್ರಮದ ಪ್ರಾತ್ಯಕ್ಷತೆ : ಗೋಳಿತ್ತೊಟ್ಟು

ನೇಸರ 26: ಗೋಳಿತ್ತೊಟ್ಟು ಸಮೀಪ ಸನ್ನಂಪಾಡಿ ಎಂಬಲ್ಲಿ CASBY ಕಂಪನಿಯ ವತಿಯಿಂದ, ಕಂಪನಿಯು ತುರ್ತುಕ್ರಮ ಪ್ರತಿಕ್ರಿಯೆ ಯೋಜನೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ, ತುರ್ತು ಪ್ರತಿಕ್ರಿಯೆ ತಂಡದ ಸದಸ್ಯರಾಗಿ ನಿಯೋಜಿಸಲಾದ ಪ್ರಮುಖ ವ್ಯಕ್ತಿಗಳ ಪ್ರತಿಕ್ರಿಯೆಯ ಮೌಲ್ಯಮಾಪನ, ಪೊಲೀಸ್, ಅಗ್ನಿಶಾಮಕ ದಳ ಮತ್ತು ಅಂಬ್ಯುಲೆನ್ಸ್‍ನಂತಹ ಬಾಹ್ಯ ಸಂಸ್ಥೆಗಳ ಪ್ರತಿಕ್ರಿಯೆ, ಸಮಯದ ಮೌಲ್ಯಮಾಪನ, ತುರ್ತು ನಿರ್ವಹಣಾ ವ್ಯವಸ್ಥೆಯಲ್ಲಿನ ಸುಧಾರಣೆಯ ವ್ಯಾಪ್ತಿಯಲ್ಲಿರುವ ಸಿಸ್ಟಮ್ ನ್ಯೂನತೆಗಳು ವಿಚಲನವನ್ನು ಮೌಲ್ಯಮಾಪನದ ಬಗ್ಗೆ ಪ್ರಾತ್ಯಕ್ಷತೆ ನಡೆಸಲಾಯಿತು, ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಪ್ರಶಾಂತ್ ಮತು ಸಿಬ್ಬಂದಿ ವರ್ಗ, ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಭರತ್ ಮತ್ತು ಸಿಬಂದಿಗಳು, ನೆಲ್ಯಾಡಿ ಹೊರಠಾಣೆಯ ಪೋಲಿಸ್ ಸಿಬಂದಿಗಳಾದ ಹಿತೇಶ್ ಮತ್ತು ಯೋಗರಾಜ್, ನೆಲ್ಯಾಡಿಯ ಅಂಬ್ಯುಲೆನ್ಸ್‍ನ ಮನೋಜ್ ಮತ್ತು ಸಿಬಂದಿಗಳು, ನೆಲ್ಯಾಡಿಯ ಪರಶುರಾಮ ಕ್ರೈನ್‍ನ ಮಾಲಕ ಸುಭಾಷ್ ರವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!